ನವಲಗುಂದ : ಕರ್ನಾಟಕದ ಅಗ್ನಿಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನವಲಗುಂದ ತಾಲೂಕಿನ ಜಾವೂರ ಗ್ರಾಮದ ಸಿದ್ದಪ್ಪ ಉಪ್ಪಾರ ಅವರಿಗೆ ಭಾರತ ಸರಕಾರದ "ಶೌರ್ಯ ಪ್ರಶಸ್ತಿ" ಲಭಿಸಿರುವ ಹಿನ್ನೆಲೆಯಲ್ಲಿ ಧಾರವಾಡ ಉಸ್ತುವಾರಿ ಸಚಿವರು ಮತ್ತು ಕೈಮಗ್ಗ ಮತ್ತು ಜವಳಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಸಿದ್ದಪ್ಪ ಉಪ್ಪಾರ ಅವರ ಮನೆಗೆ ಭೇಟಿ ನೀಡಿ, ಸಿದ್ದಪ್ಪ ಉಪ್ಪಾರ ಅವರ ತಾಯಿಯವರಿಗೆ ಸನ್ಮಾನಿಸಿ, ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಸ್.ಬಿ.ದಾನಪ್ಪಗೌಡರ, ಎ.ಎಂ.ಮನಮಿ, ಶಂಕರಗೌಡ ರಾಯನಗೌಡರ, ಸಿದ್ಧಣ್ಣ ಕಿಟಗೇರಿ ಸೇರಿದಂತೆ ಅನೇಕ ಗಣ್ಯರು ಹಾಗೂ ಗ್ರಾಮದ ಗುರು-ಹಿರಿಯರು ಉಪಸ್ಥಿತರಿದ್ದರು.
Kshetra Samachara
23/01/2022 05:41 pm