ನವಲಗುಂದ: ಇಂದು ತುಳಸಿ ಪೂಜೆ ಹಿನ್ನೆಲೆ ಪಟ್ಟಣದಲ್ಲಿ ಸಾರ್ವಜನಿಕರು ಅವಶ್ಯಕ ವಸ್ತುಗಳ ಖರೀದಿಯಲ್ಲಿ ಮುಳುಗಿದ್ದರು. ವ್ಯಾಪಾರಸ್ಥರ ಮುಖದಲ್ಲಿ ಸಹ ಸಂತಸ ಮನೆ ಮಾಡಿತ್ತು.
ಹೌದು. ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿ ಕಬ್ಬು, ಗೊಂಡೆ ಹೂವು ಹಾಗೂ ವಿವಿಧ ಬಗೆಯ ಹೂವುಗಳು ಸೇರಿದಂತೆ ತುಳಸಿ ಪೂಜೆಗೆ ಬೇಕಾಗುವ ಹುಣಸೆಕಾಯಿ, ನೆಲ್ಲಿಕಾಯಿ, ವರನ ರೂಪದಲ್ಲಿ ಪೂಜಿಸುವ ಕಟ್ಟಿಗೆ ಕೋಲು, ಫಲಪುಷ್ಪ, ಅಡಕೆ ಶೃಂಗಾರ ಮುಂತಾದ ಅಡವಿಯಲ್ಲಿ ಸಿಗುವ ಅವಶ್ಯಕ ಸಾಮಗ್ರಿಗಳ ಮಾರಾಟ ಬಲು ಜೋರಾಗಿಯೇ ನಡೆದಿತ್ತು.
Kshetra Samachara
15/11/2021 01:31 pm