ಕುಂದಗೋಳ : ತಾಲೂಕಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಉರುಸಿನಿಂದಲೇ ಖ್ಯಾತಿ ಪಡೆದ ಹಿರೇಹರಕುಣಿ ಗ್ರಾಮದ ದಾದಾಪೀರ್ ಹುಶ್ಯಾರಲಿ ದರ್ಗಾದ ಪೀಠಾಧಿಪತಿಯಾಗಿದ್ದ ಸೈಯದ್ ಶಾ ಅಲ್ಲಾಖಾದ್ರಿ ಅಜ್ಜನವರು ಸೆ.22 ರಂದು ದೈವಾಧೀನರಾಗಿದ್ದು ಇಂದು ದಿ.ಅಜ್ಜನವರ ಮಖಾಮ್ 9ನೇ ದಿನದ ಕಾರ್ಯಕ್ರಮ ಹಿಂದೂ -ಮುಸ್ಲಿಂ ಸಂಪ್ರದಾಯದಂತೆ ನೆರವೇರಿತು.
ದರ್ಗಾದ ಪೀರಾಗಳು ಹಾಗೂ ವಿವಿಧ ಸ್ವಾಮೀಜಿಗಳು ಮಖಾಮ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೈಯದ್ ಶಾ ಅಲ್ಲಾಖಾದ್ರಿ ಅಜ್ಜನವರ ಸಮಾಧಿಗೆ ಹಾಗೂ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಅಜ್ಜನವರ ಸಾಮಾಜಿಕ ಕಾರ್ಯಗಳ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ತಾಲೂಕಿನ ಅಪಾರ ಭಕ್ತ ಸಮೂಹ ಭಾಗಿಯಾಗಿ ಸೈಯದ್ ಶಾ ಅಲ್ಲಾಖಾದ್ರಿ ಅಜ್ಜನವರ ಭಕ್ತಿಗೆ ಪಾತ್ರರಾದರು.
Kshetra Samachara
01/10/2020 08:03 pm