ಹುಬ್ಬಳ್ಳಿ/ನವದೆಹಲಿ; ಈ ಬಾರಿ ನವದೆಹಲಿಯಲ್ಲಿ ಜರುಗಿದ 73ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಕರ್ನಾಟಕ ರಾಜ್ಯದ ಮತ್ತು ವಾರ್ತಾ ಇಲಾಖೆಯಿಂದ ನಿರ್ಮಿಸಿದ ಕರ್ನಾಟಕ ಪಾರಂಪಾರಿಕ ಕರಕುಶಲ ವಸ್ತುಗಳ ತೊಟ್ಟಿಲು" ಸ್ತಬ್ಧಚಿತ್ರಕ್ಕೆ ಎರಡನೆಯ ಬಹುಮಾನ ಬಂದಿದೆ.
ಹೌದು..73 ನೇ ಗಣರಾಜ್ಯೋತ್ಸವದಲ್ಲಿ ಈ ಬಾರಿ ರಾಜ್ಯ ಸಾಕಷ್ಟು ಹೆಸರು ಮಾಡಿದೆ. ಹುಬ್ಬಳ್ಳಿಯ ಮಯೂರಿ ನೃತ್ಯ ಶಾಲೆಯಿಂದ ಮಕ್ಕಳು ಭರತನಾಟ್ಯ ಪ್ರದರ್ಶನ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಅಲ್ಲದೇ ಈ ಬಾರಿಗೆ ರಾಜ್ಯದ ವಾರ್ತಾ ಇಲಾಖೆಯ ಸ್ತಬ್ಧ ಚಿತ್ರಕ್ಕೆ ಎರಡನೇ ಬಹುಮಾನ ಬಂದಿರುವುದು ಖುಷಿಯ ಸಂಗತಿಯಾಗಿದೆ.
ಒಟ್ಟಿನಲ್ಲಿ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಕೂಡ ರಾಜ್ಯದ ಹಾಗೂ ಹುಬ್ಬಳ್ಳಿಯ ಹೆಸರು ಪ್ರಕಾಶಮಾನವಾಗಿ ಪ್ರಜ್ವಲಿಸಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ..
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/02/2022 10:24 pm