ಹುಬ್ಬಳ್ಳಿ: ನಗರದ ನಾಗಶೆಟ್ಟಿಕೊಪ್ಪದ ಆಜಾದ್ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ನಂ- 08ರಲ್ಲಿ 73ನೇ ಗಣರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.
ಎಚ್‌ಡಿಎಂಸಿ ಅಧ್ಯಕ್ಷ ಮೆಹಬೂಬ್ ಬೇಪಾರಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಮಕ್ಕಳು ದೇಶದ ಆಸ್ತಿ. ಆದರೆ ಕೊರೊನಾ ಸೋಂಕಿನಿಂದಾಗಿ ಇಂದು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ, ಪ್ರವಚನ ಮಾಡಲು ಸಾಧ್ಯವಾಗುತ್ತಿಲ್ಲ. ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಅವರ ಆಟೋಟಗಳಿಗೂ ಒತ್ತು ನೀಡಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳು ಸರ್ವತೋಮುಖವಾಗಿ ಬೆಳವಣಿಗೆ ಆಗಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಎ.ಕೆ.ಸೌದಾಗಾರ, ಪಾಲಿಕೆ ಸದಸ್ಯ ಪ್ರಕಾಶ ಕುರಹಟ್ಟಿ, ಹುಬ್ಬಳ್ಳಿ ಎಹ್ಸಾಸ್ ಫೌಂಡೇಶನ್ ಸದಸ್ಯರಾದ ಅಲ್ತಾಫ್ ಬೇಪಾರಿ, ಎಚ್‌ಡಿಎಂಸಿ ಉಪಾಧ್ಯಕ್ಷೆ ಜಕಿಯಾಭಾನು, ಗುತ್ತಿಗೆದಾರ ಮುಷ್ತಾಕ್ ಪೀರಜಾದೆ ಸೇರಿದಂತೆ ಮುಂತಾದವರು ಇದ್ದರು.
Kshetra Samachara
26/01/2022 01:32 pm