ನಗರದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡುವುದಕ್ಕೆ ಹುಬ್ಬಳ್ಳಿ ಗಣೇಶೋತ್ಸವ ಮಂಡಳಿ ಎಲ್ಲ ಇಲಾಖೆಗೂ ಹೇಗೆಲ್ಲಾ ಮನವಿ ಮಾಡಿಕೊಂಡಿದೆ ಎಂಬುದನ್ನು ಪಾಲಿಕೆ ಆವರಣದಲ್ಲಿ ಗಣೇಶ ಮೂರ್ತಿಯನ್ನು ಹಾಕಿಕೊಂಡು ಅನುಕು ಪ್ರದರ್ಶನ ಮಾಡಿದರು.
ಹುಬ್ಬಳ್ಳಿ ಗಣೇಶೋತ್ಸವ ಮಂಡಳಿ ಗಣೇಶೋತ್ಸವಕ್ಕೆ ಪೊಲೀಸ್ ಇಲಾಖೆ, ಹವಾ ನಿಯಂತ್ರಣ ಇಲಾಖೆ, ಮಹಾನಗರ ಪಾಲಿಕೆ, ಹೆಸ್ಕಾಂ, ರಾಜಕೀಯ ಹೀಗೆ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಉತ್ಸವ ಮಾಡಲು ಅವಕಾಶ ಮಾಡಿ ಕೊಡಲು ಅನುಕು ಪ್ರದರ್ಶನದ ಮೂಲಕ ಮನವಿ ಸಲ್ಲಿಸಿದ್ದಾರೆ. ಆ ಅಧಿಕಾರಿಗಳು ಹೇಗೆ ಹಾರಿಕೆ ಉತ್ತರ ನೀಡಿ ಕಳಿಸಿದ್ದಾರೆ ಎಂಬುದನ್ನು ಗಣಪತಿ ಮೂರ್ತಿಯನ್ನು ಹಾಕಿಕೊಂಡು ಅಣುಕು ಪ್ರದರ್ಶನ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು
Kshetra Samachara
22/08/2022 02:35 pm