ಧಾರವಾಡ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ವಿವಿಧ ಕಾಲೆಜು ಎಲೆಕ್ಟೋಲ್ ಕ್ಲಬ್ ಗಳ ಸಹಯೋಗದಲ್ಲಿ ಜಿಲ್ಲಾ ಸ್ವಿಪ್ ಸಮಿತಿ
ಇಂದು ಬೆಳಿಗ್ಗೆ ನಗರದಲ್ಲಿ ದಿನಾಚರಣೆ ನಿಮಿತ್ಯ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದ ಮುಂಭಾಗದಲ್ಲಿ
ಜಿಲ್ಲಾ ಚುನಾವಣಾ ಅಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಡಾ.ಸುಶೀಲಾ ಬಿ.ಅವರು ಹಸಿರು ಭಾವುಟ ತೋರಿ,ಚಾಲನೆ ನೀಡಿದರು.
ಜಾಥಾ ಕಾರ್ಯಕ್ರಮವು ನಗರದ ವಿವಿಧ ಬೀದಿಗಳ ಮೂಲಕ ಸಂಚರಿಸಿ, ಮಾರುಕಟ್ಟೆ ಪ್ರದೇಶದ ವಿವೇಕಾಂದ ಸರ್ಕಲ್ ದಲ್ಲಿ ಸಮಾವೇಶ ಗೊಂಡಿತು.
ಆಲೂರು ವೆಂಕಟರಾವ ವೃತ್ತದಲ್ಲಿ ಮಾನವ ಸರಪಳಿ ರೂಪಿಸಿ, ಮತದಾನ ಮಹತ್ವಸಾರುವ ಘೋಷಣೆಗಳ ಮೂಲಕ ಜಾಥಾ ಮುಕ್ತಾಯವಾಯಿತು.
Kshetra Samachara
21/12/2020 10:04 am