ನವಲಗುಂದ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣ ಮತ್ತು ಹರಿವಾಳದ ಜಿನ್ನಿಂಗ್ ಫ್ಯಾಕ್ಟರಿ ಆವರಣದಲ್ಲಿ ಸನ್ 2021-22ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ ಗುಣಮಟ್ಟದ ಹೆಸರು ಕಾಳು ಹಾಗೂ ಉದ್ದಿನ ಕಾಳು ಖರೀದಿ ಕೇಂದ್ರವನ್ನು ಕೈಮಗ್ಗ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಉದ್ಘಾಟಿಸಿದರು.
ಕಳೆದ ವರ್ಷ 9 ಹೆಸರು ಕಾಳು ಕೇಂದ್ರಗಳಿರುವುದನ್ನು ಈ ವರ್ಷ 13 ಕ್ಕೆ ಹೆಚ್ಚಿಸಲಾಗಿರುತ್ತದೆ. ಜೊತೆಗೆ 4 ಉದ್ದಿನಕಾಳು ಖರೀದಿ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಲು ಸಚಿವರು ಕೋರಿದರು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ.ಅಧ್ಯಕ್ಷರಾದ ಯಲ್ಲಪ್ಪ ಅಕ್ಕಿ, ಮುಖಂಡರಾದಎಸ್.ಬಿ.ದಾನಪ್ಪಗೌಡರ, ಅಣ್ಣಪ್ಪ ಬಾಗಿ, ಗುರುನಾಥ ಉಳ್ಳಾಗಡ್ಡಿ, ರೈತ ಮುಖಂಡರಾದ ಶ್ರೀ ಚಂದ್ರಗೌಡರು ಸೇರಿದಂತೆ ಅನೇಕ ಮುಖಂಡರು, ರೈತರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
30/08/2021 07:22 pm