ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೆ.ಎಚ್ ಪಾಟೀಲ್ ಕಾಲೇಜಿನಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಹುಬ್ಬಳ್ಳಿ: ಕೆ.ಎಚ್ ಪಾಟೀಲ್ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಪ್ರಾರ್ಥನಾ ಎಜುಕೇಶನ್ ಸೊಸೈಟಿ ಅಕಾಡೆಮಿಕ್ ಮೆಂಟರಿಂಗ್ ಮಾಡುತ್ತಿರುವ ವಿಜ್ಞಾನ ವಿಭಾಗದ ಅನನ್ಯ ಕರ್ಪೂರ ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಚಂದನ ಕೋಟಿ ಅವರನ್ನು ಸನ್ಮಾನಿಸಲಾಯಿತು. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುಮಾರಿ ಅನನ್ಯ ಕರ್ಪೂರ ಭೌತಶಾಸ್ತ್ರದಲ್ಲಿ 99, ರಸಾಯನಶಾಸ್ತ್ರದಲ್ಲಿ 100, ಗಣಿತ ವಿಷಯದಲ್ಲಿ 100 ಹಾಗೂ ಜೀವಶಾಸ್ತ್ರದಲ್ಲಿ 100, ಪಿ.ಸಿ.ಎಂ.ಬಿಯಲ್ಲಿ 400 ಅಂಕಗಳಿಗೆ 399 ಅಂಕಗಳು. ಒಟ್ಟು 600 ಅಂಕಗಳಿಗೆ 586 ಅಂಕಗಳನ್ನು ಪಡೆದು ಪಾಲಕರಿಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಇದರಂತೆ ಕಾಮರ್ಸ್ ವಿಭಾಗದಲ್ಲಿ ಕಚಂದನ ಕೋಟಿ ಅವರು ಒಟ್ಟು 548 ಅಂಕಗಳು, 600 ಅಂಕಗಳಿಗೆ ಪಡೆದು ಪಾಲಕರಿಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇವರ ಈ ಸಾಧನೆಗೆ ಮೆಚ್ಚಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಸನ್ಮಾನಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವೇಮನ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಆರ್.ಕೆ ಪಾಟೀಲ್ ಮಾತನಾಡಿ ಸನ್ಮಾನಿತ ವಿದ್ಯಾರ್ಥಿಗಳು ಶಿಕ್ಷಕರ ಪಾತ್ರ ತಮ್ಮ ಫಲಿತಾಂಶದಲ್ಲಿ ಅತೀ ಮುಖ್ಯವಾಗಿತ್ತು. ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ನೆರವನ್ನು ವಿದ್ಯಾಭ್ಯಾಸದಲ್ಲಿ ನಿಸ್ಸಂಕೋಚವಾಗಿ ಪಡೆಯಬೇಕು ಎಂದರು. ಕಾರ್ಯಕ್ರಮದಲ್ಲಿ ವೇಮನ ವಿದ್ಯಾವರ್ಧಕ ಸಂಘದ ಸ್ಥಾನೀಕ ಮಾಡಳಿ ಅಧ್ಯಕ್ಷ ಇಟಗಿ, ಉಪಾಧ್ಯಕ್ಷ ರೆಡ್ಡರ್, ಪಿ.ಯು ಕಾಲೇಜು ಪ್ರಾಚಾರ್ಯ ಶ್ರೀ ಎಸ್ ಬಿ ಸಣ್ಣಗೌಡರ, ವಿಜ್ಞಾನ ವಿಭಾಗದ ಸಹ ಸಂಯೋಜಕ ಡಾ ಶಿವರಾಮ ಪಾಟೀಲ್, ಶಂಕರ ಕುಂಬಾರ, ಶಿಕ್ಷಕರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

22/06/2022 10:57 pm

Cinque Terre

68.72 K

Cinque Terre

2

ಸಂಬಂಧಿತ ಸುದ್ದಿ