ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕನ್ನಡ ಶಾಲೆ ಮಕ್ಳು ಯಾರಿಗೂ ಕಮ್ಮಿ ಇಲ್ಲ

ಕುಂದಗೋಳ : ಹಳ್ಳಿವಾಡಿನ ಸರ್ಕಾರಿ ಶಾಲೆ ಮಕ್ಕಳು ಇಂಗ್ಲಿಷ್ ಶಾಲೆಗೆ ನಾವೇನು ಕಡಿಮೆ ಇಲ್ಲಾ ಎನ್ನುವಂತೆ ತಮ್ಮ ಶಾಲೆಯಲ್ಲಿ ನಡೆದ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಾಬೀತು ಮಾಡಿದ್ದಾರೆ.

ಹೌದು ! ದೇಶಪಾಂಡೆ ಫೌಂಡೇಶನ್ ಸಹಯೋಗದಲ್ಲಿ ಸ್ಕಿಲ್ ಇನ್ ವಿಲೇಜ್ ಕಾರ್ಯಕ್ರಮದಲ್ಲಿ ಯರಗುಪ್ಪಿಯ ಸರ್ಕಾರಿ ಶಾಲೆ ಮಕ್ಕಳಿಗೆ ಕಮ್ಯುನಿಕೇಶನ್ ಸ್ಕಿಲ್, ಹಾಗೂ ಲೈಫ್ ಸ್ಕಿಲ್ ಪಾಠ ಬೋಧನೆ ಹೇಳಲಾಗುತ್ತಿದೆ.

ಈ ಗ್ರಾಮೀಣ ಮಕ್ಕಳ ಅಭಿವೃದ್ಧಿಗಾಗಿ ಮಾಡುತ್ತಿರುವ ಕಾರ್ಯಕ್ರಮ ಸಿಲ್ಕ್ ಇನ್ ವಿಲೇಜ್ ತರಬೇತಿ ಯಶಸ್ವಿಯಾಗಿ ವರ್ಷ ಪೂರ್ಣಗೂಂಡ ಹಿನ್ನೆಲೆ, ಇಂದಿನ ಈ ಗ್ರಾಜ್ಯುವೇಷನ್ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳ ನೃತ್ಯ, ಹಾಡು, ಛದ್ಮವೇಷ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಅವರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಕ್ಕಳ ಕಲಿಕೆಯ ವಿಷಯಗಳ ಪ್ರದರ್ಶನ ರೋಲ್ ಪ್ಲೇ, ಸ್ಕಿಟ್, ಡೈಲಿ ರೂಟೀನ್, ಟಾಪಿಕ್ ಪ್ರಸೆಂಟೇಷನ್ ಜೊತೆ ಒಗಟು, ಕವನ, ಕಥೆ ಕಾರ್ಯಕ್ರಮಗಳು ಸ್ಪರ್ಧೆ ಪ್ರತಿ ಸ್ಪರ್ಧೆ ಎಂಬಂತೆ ನಡೆದವು.

ವಿದ್ಯಾರ್ಥಿಗಳು ನೃತ್ಯ ನೋಡಲು ಬಂದ ಮಕ್ಕಳ ಪಾಲಕರು ಪೋಷಕರು ಮಕ್ಕಳ ಜ್ಞಾನ ನೋಡಿ ಮನದಲ್ಲೇ ಸಂತೋಷ ಪಟ್ಟು ಸಂಭ್ರಮಿಸಿದರು. ಇನ್ನೂ ವಿಶೇಷ ಎಂದ್ರೇ ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಗಳೇ ನಡೆಸಿಕೊಟ್ಟು ಹೊಸ ಅನುಭವ ಪಡೆದರು.

Edited By : Nagesh Gaonkar
Kshetra Samachara

Kshetra Samachara

11/04/2022 10:18 pm

Cinque Terre

20.3 K

Cinque Terre

0

ಸಂಬಂಧಿತ ಸುದ್ದಿ