ನವಲಗುಂದ : ಭಾರತ ಸರಕಾರದ ನೆಹರು ಯುವ ಕೇಂದ್ರವು ನವಲಗುಂದ ತಾಲೂಕಿನ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ನ.17 ರಂದು ಬೆಳಿಗ್ಗೆ 10-30 ಕ್ಕೆ ನವಲಗುಂದದ ಶ್ರೀ ಶಂಕರ ಕಾಲೇಜ್‍ನಲ್ಲಿ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದ ಕುರಿತು ಒಟ್ಟಾಗಿ ನಾವು ಬೆಳೆಯುತ್ತೇವೆ, ಒಟ್ಟಾಗಿ ನಾವು ಏಳಿಗೆ ಹೊಂದುತ್ತೇವೆ, ಒಟ್ಟಾರೆಯಾಗಿ ನಾವು ಪ್ರಯತ್ನಿಸುತ್ತೇವೆ, ಒಟ್ಟಾಗಿ ನಾವು ಬಲಿಷ್ಠ ಭಾರತವನ್ನು ನಿರ್ಮಿಸುತ್ತೇವೆ (ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್) ("patriotism and nation building " with the theme of sabka saath ,sabka vikas ,sabka vishwas,sabka prayas) ಎಂಬ ವಿಷಯದ ಕುರಿತು ಸ್ಪರ್ಧೆ ನಡೆಯಲಿದೆ. ಹೆಚ್ಚಿನ ವಿವರಗಳಿಗೆ 7975875089 ಮೊಬೈಲ್ ಸಂಪರ್ಕಿಸಬಹುದೆಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
15/11/2021 10:32 pm