ನವಲಗುಂದ: ನಗರದ 15 ಮತ್ತು 18ನೇ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಅಂಗನವಾಡಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಸಮಾಜ ಸೇವಕ ಮಾಬುಸಾಬ್ ಯರಗುಪ್ಪಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿರುವುದು ಸಂಭ್ರಮದ ಗಳಿಗೆಯಾಗಿದೆ. ಕಳೆದ 21 ತಿಂಗಳಿನಿಂದ ಕೊರೊನಾ ಹಿನ್ನೆಲೆಯಲ್ಲಿ ಮುಚ್ಚಿದ ಅಂಗನವಾಡಿ ಕೇಂದ್ರವನ್ನು ತೆರೆದಿರುವುದು ನಮಗೆಲ್ಲಾ ಬಹಳ ಖುಷಿಯನ್ನು ತಂದಿದೆ. ಕಳೆದುಕೊಂಡ ಮಗುವು ಸಿಕ್ಕಾಗ ತಾಯಿ ಎಷ್ಟು ಸಂತೋಷ ಪಡುತ್ತಾರೋ ಆ ಸಂತೋಷ್ ಇವತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ಅಂಗನವಾಡಿ ಮಕ್ಕಳಿಗೆ ಸಮಾಜ ಸೇವಕ ಮಾಬುಸಾಬ್ ಯರಗುಪ್ಪಿ ತಮ್ಮ ಸ್ವಂತ ಹಣದಿಂದ ನೋಟ್ ಬುಕ್ ವಿತರಿಸಿ, ನಂತರ ರಾಷ್ಟ್ರಿಯ ಪೋಷಣಾ ಯೋಜನೆ ಅಡಿಯಲ್ಲಿ 7ರಿಂದ 12 ತಿಂಗಳ ಮಗುವಿಗೆ ಗಂಜಿ ಕುಡಿಸುವ ಕಾರ್ಯಕ್ರಮವನ್ನು ಸಹ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾಡೆಲ್ ಹೈಸ್ಕೂಲ್‌ನ ನಿವೃತ್ತ ಶಿಕ್ಷಕ ರಾಜೇಂದ್ರ ಕಮತರ, ಪುರಸಭೆ ಸದಸ್ಯ ಮಹಾಂತೇಶ್ ಭೋವಿ, ಮಹಿಳಾ ಮೇಲ್ವಿಚಾರಕಿ ನಾಗರತ್ನ ಯಲವಗಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಎನ್ ಹಾಲಗೇರಿ, ವ್ಯಾಪಾರಸ್ಥ ರಿಯಾಜ್ ಅಹ್ಮದ ನಾಶಿಪುಡಿ, ಹಿರಿಯರಾದ ಸಣ್ಣಈರಪ್ಪ ಕರಲಿಂಗಣ್ಣವರ, ಈರಪ್ಪ ಪುಗಶೇಟ್ಟಿ, ಅಂಗನವಾಡಿ ಕಾರ್ಯಕರ್ತೆಯರಾದ ಭಾರತಿ ಹಳೆಮನಿ, ಶಾಂತಾ ಹಂಚಿನಾಳ, ಸಹಾಯಕಿಯರಾದ ಮಹಾದೇವಿ ಇಚ್ಚಂಗಿ, ಚನ್ನಮ್ಮ ದೊಡ್ಡಮನಿ ಉಪಸ್ಥಿತರಿದ್ದರು.
Kshetra Samachara
08/11/2021 07:41 pm