ಹುಬ್ಬಳ್ಳಿ : ಒಂದೆಡೆ ಚಿಣ್ಣರ ಕಲರವ, ಪಾಲಕರ ಸಂಭ್ರಮ, ಇನ್ನೊಂದೆಡೆ ಸಂಗೊಳ್ಳಿ ರಾಯಣ್ಣ, ಬಬ್ರುವಾಹನ, ಕೆಳದಿ ಚನ್ನಮ್ಮ , ಶಿರಡಿ ಸಾಯಿಬಾಬಾ, ದುರ್ಯೋಧನ, ಶಕುನಿ ವೇಷಭೂಷಣದಲ್ಲಿ ತಮ್ಮ ಕಲೆ ಪ್ರದರ್ಶಿಸಲು ಕಾತರರಾಗಿರುವ ನಟನಾ ಮಣಿಗಳ ಉತ್ಸುಕತೆಯಿಂದ ಧಾರವಾಡ ರಂಗಾಯಣದ ಸುವರ್ಣ ಸಮುಚ್ಚಯ ಗುರುವಾರ ರಂಗೆದ್ದಿತು.
PublicNext App ಡಿಜಿಟಲ್ ಸುದ್ದಿ ಮಾಧ್ಯಮದ ಸಹಕಾರದೊಂದಿಗೆ ನಗರದ ಸುನಿಧಿ ಕಲಾ ಸೌರಭ ಸಂಸ್ಥೆ ಆಯೋಜಿಸಿದ್ದ ಅನ್ ಲೈನ್ ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ಝಲಕ್ ಇದು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಹಾಗೂ ಸಾಹಿತಿ ನಿಂಗಣ್ಣ ಕುಂಠಿ, ಸುನಿಧಿ ಕಲಾ ಸೌರಭ ಕಾರ್ಯವನ್ನು ಶ್ಲಾಘಿಸಿ ಇದೇ ರೀತಿ ಮಕ್ಕಳ ಸುಪ್ತ ಪ್ರತಿಭೆ ಅರಳಲು ವೇದಿಕೆ ಸೃಷ್ಟಿಸಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿ ಡಾ: ಎಂ.ಜಿ ಹಿರೇಮಠ, 70 ರ ದಶಕದಲ್ಲಿ ಕಿಮ್ಸ್ ದಲ್ಲಿ ರಂಗ ಚಟುವಟಿಕೆ ಪ್ರಾರಂಭವಾಗಲು ರಂಗಕರ್ಮಿ ಹಾಗೂ ರಂಗಾಯಣದ ಮಾಜಿ ನಿರ್ದೇಶಕ ಸುಭಾಸ್ ನರೇಂದ್ರ ಕಾರಣ ಎಂದು ನೆನಪಿಸಿಕೊಂಡರು. ಡಿಜಿಟಲ್ ವೇದಿಕೆ ಬಳಸಿಕೊಂಡು ಸುನಿಧಿ ಕಲಾ ಸೌರಭ ಏರ್ಪಡಿಸಿದ್ದ ಆನ್ ಲೈನ್ ಏಕಪಾತ್ರಾಭಿನಯ ಸ್ಪರ್ಧೆ ನಿಜಕ್ಕೂ ಅಭಿನಂದನಾರ್ಹ. ಇದೇ ರೀತಿ ಸಂಸ್ಥೆ ರಂಗ ಪಯಣ ಮುಂದುವರಿಯಲಿ ಎಂದು ಹಾರೈಸಿದರು.
ಅತಿಥಿ PublicNext App ಮಾಧ್ಯಮ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ಕೇಶವ ನಾಡಕರ್ಣಿ, ಕೊವಿಡ್ ಕಾರಣದಿಂದ ಎಲ್ಲ ಕ್ಷೇತ್ರಗಳು ನಿಸ್ತೇಜವಾಗಿವೆ. ಅದರಲ್ಲೂ ರಂಗ ಚಟುವಟಿಕೆಗೆ ಭಾರಿ ಧಕ್ಕೆಯಾಗಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳ ಸಹಕಾರದೊಂದಿಗೆ ಸುನಿಧಿ ಕಲಾ ಸೌರಭ ಸಂಸ್ಥೆ ಯಶಸ್ವಿಯಾಗಿ ಈ ಸ್ಪರ್ಧೆ ಪೂರೈಸಿ ಇಂದು ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿರುವುದು ಸ್ವಾಗತಾರ್ಹವೆಂದರು.
ಇದೇ ಸಂದರ್ಭದಲ್ಲಿ PublicNext App ಕಾರ್ಯ ವ್ಯಾಪ್ತಿ, ಚಟುವಟಿಕೆ, ಸುದ್ದಿ ಜಾಲ ವ್ಯವಸ್ಥೆ , ನಿತ್ಯ 2.50 ಲಕ್ಷ ಓದುಗರ ಸ್ಪಂದನೆ ಕುರಿತು ವಿವರಿಸಿದರು ಅವಳಿ ನಗರದಲ್ಲಿ ನಡೆಯುವ ಎಲ್ಲ ರಂಗಚಟುವಟಿಕೆಗಳಿಗೆ ಪಬ್ಲಿಕ್ ನೆಕ್ಸ್ಟ್ ಪ್ರಚಾರದ ಮೂಲಕ ಸಹಕಾರ ನೀಡಲಿದೆ ಎಂದರು.
ರಂಗಾಯಣದ ನಿರ್ದೇಶಕ ರಮೇಶ ಪರವಿನಾಯಕ, ರಂಗಕರ್ಮಿಗಳು ರಂಗಾಯಣದ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕೆಂದು ಮನವಿ ಮಾಡಿರು. ತೀರ್ಪುಗಾರರಾದ ಡಾ: ವಿಜಯ ಕಾಮತ್ , ಸ್ಪರ್ಧೆಗೆ ರಾಜ್ಯದಾದ್ಯಂತ ಬಂದಿದ್ದ ಮಕ್ಕಳ 197 ವಿಡಿಯೊಗಳನ್ನು ಸುಮಾರು 11 ತಾಸು ಸೂಕ್ಮವಾಗಿ ವೀಕ್ಷಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು ತಮ್ಮ ಅನುಭವ ಹಂಚಿಕೊಂಡರು.
ಪ್ರಾಸ್ತಾವಿಕ ಮಾತನಾಡಿದ ರಂಗಾಯಣದ ಮಾಜಿ ನಿರ್ದೇಶಕ ಸುಭಾಸ ನರೇಂದ್ರ, ಸುನಿಧಿ ಕಲಾ ಸೌರಭ ನಡೆದ ಬಂದ ದಾರಿ ವಿವರಿಸಿದರಲ್ಲದೆ ವಿವಿಧ ಸಂಘ ಸಂಸ್ಥೆಗಳು ನೀಡಿದ ಸಹಕಾರವನ್ನು ಸ್ಮರಿಸಿದರು.
ಅತಿಥಿಗಳನ್ನು ಸ್ವಾಗತಿಸಿದ ಸುನಿಧಿ ಕಲಾ ಸೌರಭ ಸಂಸ್ಥೆ ಕಾರ್ಯದರ್ಶಿ ಶ್ರೀಮತಿ ವೀಣಾ ಅಠವಲೆ, ನಿರೀಕ್ಷೆಗೂ ಮೀರಿ ರಾಜ್ಯದ ಮೂಲೆ ಮೂಲೆಗಳಿಂದ ಮಕ್ಕಳು ಪಾಲ್ಗೊಳ್ಳಲು ನೆರವಾಗಿದ್ದು PublicNext App . ಈ ಮಾಧ್ಯಮ ನಿರಂತರವಾಗಿ ನೀಡಿದ ಪ್ರಚಾರದ ಪರಿಣಾಮ ಬೆಂಗಳೂರು, ಕಾಸರಗೋಡ, ಮಂಡ್ಯ, ಶಿರಸಿ ಸೇರಿದಂತೆ ರಾಜ್ಯದ ಮೂಲೆಗಳಿಂದ 197 ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತಾಯಿತು ಎಂದ ಪ್ರಶಂಸಿಸಿದರಲ್ಲದೆ, ಸಹಕಾರ ನೀಡಿದ PublicNext ಮಾಧ್ಯಮದ ಆಡಳತ ಮಂಡಳಿ ಹಾಗೂ ಎಲ್ಲ ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಅತಿಥಿ ಹಾಗೂ ತೀರ್ಪುಗಾರರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ರಂಗಕಲಾವಿದೆ ಹಾಗೂ ಇನ್ನೋರ್ವ ತೀರ್ಪುಗಾರರಾಗಿದ್ದ ಶ್ರೀಮತಿ ಸುನಂದಾ ನಿಂಬನಗೌಡರ ಸೇರಿದಂತೆ ಎಲ್ಲ ಅತಿಥಿಗಳು ಪ್ರಶಸ್ತಿ ವಿಜೇತ ಮಕ್ಕಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರವಿತರಿಸಿದರು.
ಇದಕ್ಕೂ ಮುನ್ನ ಏರ್ಪಟ್ಟ ಸ್ಪರ್ಧಾ ವಿಜೇತ ಮಕ್ಕಳ ಏಕಪಾತ್ರಭಿನಯ ಪ್ರೇಕ್ಷಕರ ಮನಸೂರೆಗೊಂಡಿತು. ಕುಮಾರಿ ಸುನಿಧಿ, ತಾಂತ್ರಿಕ ಸಹಾಯದೊಂದಿಗೆ ಸ್ಪರ್ಧೆ ಯಶಸ್ವಿಗೆ ಶ್ರಮಿಸಿದರೆ ಕುಮಾರ ಸೌರಭ ನರೇಂದ್ರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿ ಎಲ್ಲರ ಪ್ರಶಂಸೆಗೆ ಪಾತ್ರಾರಾದರು.
ಇದಕ್ಕೂ ಮುನ್ನ ಏರ್ಪಟ್ಟ ಸ್ಪರ್ಧಾ ವಿಜೇತ ಮಕ್ಕಳ ಏಕಪಾತ್ರಭಿನಯ ಪ್ರೇಕ್ಷಕರ ಮನಸೂರೆಗೊಂಡಿತು.ಇದಕ್ಕೂ ಮುನ್ನ ಏರ್ಪಟ್ಟ ಸ್ಪರ್ಧಾ ವಿಜೇತ ಮಕ್ಕಳ ಏಕಪಾತ್ರಭಿನಯ ಪ್ರೇಕ್ಷಕರ ಮನಸೂರೆಗೊಂಡಿತು. ಕುಮಾರಿ ಸುನಿಧಿ, ತಾಂತ್ರಿಕ ಸಹಾಯದೊಂದಿಗೆ ಸ್ಪರ್ಧೆ ಯಶಸ್ವಿಗೆ ಶ್ರಮಿಸಿದರೆ ಕುಮಾರ ಸೌರಭ ನರೇಂದ್ರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿ ಎಲ್ಲರ ಪ್ರಶಂಸೆಗೆ ಪಾತ್ರಾರಾದರು.
Kshetra Samachara
11/12/2020 04:39 pm