ನವಲಗುಂದ : ಗೌರಿ ಹುಣ್ಣಿಮೆಯ ಕೊನೆಯ ದಿನವಾದ ಇಂದು ನವಲಗುಂದ ಪಟ್ಟಣದ ಕಳ್ಳಿ ಮಠ ಓಣಿಯಲ್ಲಿನ ಯುವತಿಯರು ಚಂದದಿ ಹಳ್ಳಿ ಸಂಪ್ರದಾಯದ ಸೀರೆ ತೊಟ್ಟು ತಲೆ ಮೇಲೆ ಕುಂಭವನ್ನು ಹೊತ್ತು ಮೆರವಣಿಗೆ ಮೂಲಕ ನೀಲಮ್ಮನ ಕೆರೆಗೆ ತೆರಳಿ ಹೊಂಗಡಗಳಿಗೆ ವಿಶೇಷ ಪೂಜೆ ಮಾಡಿ ಕೆರೆಯ ನೀರಿನಲ್ಲಿ ಕುಂಭವನ್ನು ತೇಲಿ ಬಿಟ್ಟರು.
ಕುಂಬಾರರ ಮನೆಯಲ್ಲಿ ತಂದ ಹೊಸ ಗಡಿಗೆಗಳಿಗೆ ರಂದ್ರ ಹಾಕಿ ಸುತ್ತಲು ಸುಣ್ಣ, ಕೆಮ್ಮಣ್ಣಿನಿಂದ ಸಿಂಗರಿಸಿದ ಕುಂಭವನ್ನು ಐದು ಯುವತಿಯರು ತಲೆ ಮೇಲೆ ಹೊತ್ತು ಜನಪದ ಹಾಡನ್ನು ಹಾಡುತ್ತಾ ಮೆರವಣಿಗೆ ಮೂಲಕ ನೀಲಮ್ಮನ ಕೆರೆಗೆ ತೆರಳಿ ಕುಂಭವನ್ನು ನೀರಿನಲ್ಲಿ ತೇಲಿ ಬಿಟ್ಟ ದೃಶ್ಯವನ್ನು ನೋಡಲು ಎರಡು ಕಣ್ಣು ಸಾಲದ್ದಾಗಿತ್ತು.
ಇಂದಿನ ಆಧುನಿಕತೆಯಲ್ಲಿ ನಮ್ಮ ಗ್ರಾಮೀಣ ಹಬ್ಬಗಳು ಕಣ್ಮರೆಯಾಗುತ್ತಿರುವ ಈ ದಿಸೆಯಲ್ಲಿ ನಮ್ಮ ಮಹಿಳೆಯರು ಇಂಥ ಸಂಪ್ರದಾಯ ಆಚರಣೆಯನ್ನು ಜೀವಂತವಾಗಿ ಇಟ್ಟಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.
Kshetra Samachara
04/12/2020 10:14 pm