ಧಾರವಾಡ : ಇಲ್ಲಿಯ ಕಿಲ್ಲೆಯಲ್ಲಿರುವ ಪುರಾತನ ಕಾಲದ ವಿಠಲ ರುಕುಮಾಯೀ ಮಂದಿರದಲ್ಲಿ ಡಿ.1 ರಂದು ಸಂಜೆ ಕಾರ್ತಿಕ ಮಾಸದ ಸಹಸ್ರ ದೀಪೋತ್ಸವ ಭಕ್ತಿ ಭಾವಗಳಿಂದ ಜರುಗಿತು.
ಪೇಶ್ವೆ ಕಾಲಕ್ಕೆ ಸೇರಿದ ಈ ವಿಠ್ಠಲ ರುಕುಮಾಯಿ ಮಂದಿರ ಭಕ್ತರ ಆಸ್ಥಾ ಕೇಂದ್ರವಾಗಿದ್ದು, ಪ್ರತಿ ವರ್ಷ ಇಲ್ಲಿ ಶ್ರೀರಾಮನವಮಿ ಹನುಮ ಜಯಂತಿ, ಗೋಕಲಾಷ್ಠಮಿ ಹೀಗೆ ಎಲ್ಲ ಹಿಂದೂ ಸಂಪ್ರದಾಯದ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಕಾಲಕ ಕಾಲಕ್ಕೆ ಪಂಡಿತರಿಂದ ಭಾಗವತ ಪ್ರವಚನ ಪಾಠಗಳು ನಡೆಯುತ್ತಿರುವುದು ವಿಶೇಷವಾಗಿದೆ.
ಸಹಸ್ರ ದೀಪೋತ್ಸವದ ಸಂದರ್ಭದಲ್ಲಿ ಶ್ರೀಮತಿ ಕಲಾವತಿ ಸುಭಾಸ ಶಿಂಧೆ ಅವರ ಹಸ್ತದಲ್ಲಿ ರಂಗೋಲಿಯಲ್ಲಿ ಮೂಡಿಬಂದ ವಿಠ್ಠಲ ರುಕ್ಮಿಣಿ ಚಿತ್ರ ಭಕ್ತರ ಮನಸೂರೆಗೊಂಡಿತು. ತೈಲ ದೀಪಗಳಲ್ಲಿ ಝಗಮಗಿಸಿದ ಮಂದಿರದ ನೋಟ ಭಕ್ತರ ಮನಸೂರೆಗೊಂಡಿತು.
ಮಹಿಳೆಯರು, ಮಕ್ಕಳು , ಹಿರಿಯರು ದೀಪಗಳನ್ನು ಹಚ್ಚಿ ಭಕ್ತಿ ಸಲ್ಲಿಸಿದರು.
Kshetra Samachara
02/12/2020 10:08 am