ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಹಬ್ಬದ ಸೊಗಡು ತಂದು ಕಂಟೇಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ

ಹುಬ್ಬಳ್ಳಿ : ಅಬ್ಬಾ ! ಈ ಹಳ್ಳಿಗಳು ಅಲ್ಲಿನ ಜಾತ್ರೆ, ನಿಬ್ಬಣ, ಸಭೆ, ಸಮಾರಂಭಗಳನ್ನ ನೊಡುವುದೇ ಒಂದು ವಿಶೇಷ ನೋಡಿ. ಯಾಕೆಂದ್ರೇ ಅಲ್ಲಿನ ಜನರ ಸಂತೋಷ ಅವರು ಶುಭ ಸಂದರ್ಭಗಳನ್ನು ತೋರ್ಪಡಿಸುವ ರೀತಿ ಮತ್ತೋಂದು ಮಾಯಾ ಲೋಕಕ್ಕೆ ನೋಡುಗರನ್ನ ಕರೆದೊಯ್ದು ಬಿಡುತ್ತದೆ.

ಇಂತಹ ಶುಭ ಸಂದರ್ಭದ ಡೊಳ್ಳು ಕುಣಿತ, ಕೋಲಾಟ, ಭಜನೆ ಪದ, ಕರಡಿ ಮಜಲು, ಕುಂಭ ಕೊಡಗಳನ್ನ ಹೊತ್ತ ಮಹಿಳೆ ಮಕ್ಕಳು ಸಡಗರದ ನಡುವೆ ಗ್ರಾಮದೇವಿ ಕಂಟಮ್ಮದೇವಿಯ ಪಲ್ಲಕ್ಕಿ ಉತ್ಸವದ ಮೆರವಣಿಗೆ ಕುಂದಗೋಳ ಮತಕ್ಷೇತ್ರದ ಮಾವನೂರಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ.

ಮಾವನೂರು ಗ್ರಾಮದ ಕಂಟೆಮ್ಮದೇವಿ ನೂತನ ಕಟ್ಟಡ ಹಾಗೂ ದೇವಿಯ ಮೂರ್ತಿ ಪುನರ ಪ್ರತಿಷ್ಠಾಪನೆಯ ಶುಭ ಸಮಾರಂಭದಲ್ಲಿ ಕಂಡು ಬಂದ ವಿಹಂಗಮ ನೋಟದಲ್ಲಿ ಗ್ರಾಮಸ್ಥರ ಭಕ್ತಿ ಇಮ್ಮಡಿಗೊಳ್ಳುವ ಈ ಉತ್ಸವಕ್ಕೆ ಕಲಘಟಗಿಯ ಷ.ಬ್ರ.ರೇವಣಶಿದ್ಧ ಶಿವಾಚಾರ್ಯ ಸ್ವಾಮೀಜಿ, ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಶ್ರೀ ಗುರು ಅಭಿನವ ರೇವಣಸಿದ್ಧೇಶ್ವರ ಸ್ವಾಮೀಜಿ, ಪರಮಪೂಜ್ಯ ಮು.ನಿ.ಪ್ರ ಶ್ರೀ ಜ್ಞಾನಯೋಗಿ ಚನ್ನಬಸವ ದೇಶಿಕೇಂದ್ರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನೆರವೇರುತ್ತಿದೆ.

ಗ್ರಾಮದಲ್ಲಿ ಎತ್ತಿನ ಬಂಡಿಯಲ್ಲಿ ಕಂಟೇಮ್ಮದೇವಿ ಮೂರ್ತಿಯನ್ನು ಮೆರವಣಿಗೆ ಮಾಡಿ, ಮಹಾಭಿಷೇಕ ನೆರವೇರಿಸಿ ದೇವಸ್ಥಾನದ ಗದ್ದುಗೆಯಲ್ಲಿ ಪುನರ ಪ್ರತಿಷ್ಠಾಪನೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಲಾಯಿತು ಈ ಶುಭ ಸಂದರ್ಭದಲ್ಲಿ ಗ್ರಾಮಸ್ಥರು ಭಾಗಿಯಾಗಿ ಪ್ರಸಾದ ಪಡೆದು ಪುನೀತರಾದರು.

Edited By :
Kshetra Samachara

Kshetra Samachara

26/11/2020 04:50 pm

Cinque Terre

16.13 K

Cinque Terre

0

ಸಂಬಂಧಿತ ಸುದ್ದಿ