ಧಾರವಾಡ : ನಗರದ 71 ಬಿಜೆಪಿ ಯುವಮೋರ್ಚಾ ಘಟಕದ ಇಂದು ನಗರದ ಹೊಸ ಬಸ್ ನಿಲ್ದಾಣದಲ್ಲಿ ಸ್ವಚ್ಛ ಸಂಡೆ ಅಭಿಯಾನಕ್ಕೆ ಶಾಸಕ ಅಮೃತ ದೇಸಾಯಿ ಅವರು ಚಾಲನೆ ನೀಡಿದರು.
ಮಹಾತ್ಮಾ ಗಾಂಧಿಜಿಯವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ದೇಶದ ಜನತೆ ಸ್ವಚ್ಚತೆಗೆ ನೀಡುತ್ತಿರುವ ಆದ್ಯತೆ ಹಾಗು ಸುತ್ತಮುತ್ತಲಿನ ವಾತಾವರಣ ಸ್ವಚ್ಛ ಮಾಡುವದರಿಂದ ರೋಗರುಜಿನಗಳು ಕಡಿಮೆಯಾಗಿ ಆರೋಗ್ಯದಲ್ಲಿ ವೃದ್ದಿಯಾಗುವದು ಹಾಗು ವಿಶೇಷವಾಗಿ ಯುವಕರು ಸ್ವಚ್ಚತೆ ಬಗ್ಗೆ ಕಾಳಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಅಮೃತ ದೇಸಾಯಿಯವರು ಸ್ವಚ್ಚತಾ ಸೇನಾನಿಗಳಿಗೆ ತಿಳಿಸಿದರು.
ಬಿಜೆಪಿ ಯುವಮೋರ್ಚಾ ಅಧ್ಯಕ್ಷರು ಶಕ್ತಿ ಹಿರೇಮಠ,ಜಿಲ್ಲಾಧ್ಯಕ್ಷರು ಕಿರಣ ಉಪ್ಪಾರ, ಸುನೀಲ ಮೋರೆ ಯುವಮೋರ್ಚಾ ಉಸ್ತುವಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ತಿಪ್ಪಣ್ಣ ಮಜ್ಜಗಿ, ಮಂಡಳ ಪ್ರಧಾನವಕಾರ್ಯದರ್ಶಿಗಳು ಶ್ರೀನಿವಾಸ ಕೋಟ್ಯಾನ ಹರೀಶ ಬಿಜಾಪು,ಯುವಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿಗಳು ಶಿವಯ್ಯ ಹಿರೇಮಟ ಸಂಗಮ ಹಂಜಿ ಮಂಡಳ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಕಾರ್ಯಕರ್ತರು ಸ್ವಚ್ಛ ಗೊಳಿಸಿದರು.
Kshetra Samachara
22/11/2020 01:26 pm