ಹುಬ್ಬಳ್ಳಿ: ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘದ ಚುನಾವಣಾ ಮತದಾನವು ವಾಣಿಜ್ಯನಗರಿ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಜರುಗಿತು.
ಒಟ್ಟು 76 ಜನ ಅಭ್ಯರ್ಥಿ ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ್ದು,ವಾಯುವ್ಯ ಕರ್ನಾಟಕ ಸಾರಿಗೆ ವಲಯದ ಸಿಬ್ಬಂದಿಗಳು ಇಂದು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು.
ಇನ್ನೂ ಮತದಾರರು ಒಂದೇ ಕಡೆಯಲ್ಲಿ ಜಮಾವಣೆಗೊಂಡಿದ್ದು, ವಾಹನ ಸಂಚಾರಕ್ಕೆ ಕೊಂಚ ಅಡೆತಡೆ ಉಂಟಾಯಿತು. ಅಲ್ಲದೇ ಕೊರೋನಾ ಭಯ ಮರೆತು ಯಾವುದೇ ಸಾಮಾಜಿಕ ಅಂತರ ಪಾಲಿಸದೇ ಸಾರಿಗೆ ಇಲಾಖೆ ಮತದಾರರು ಚುನಾವಣೆಯಲ್ಲಿ ಭಾಗವಹಿಸಿದ್ದರು.
Kshetra Samachara
19/11/2020 05:47 pm