ಧಾರವಾಡ: ಪಿಎಸ್ಐ ಅಕ್ರಮ ನೇಮಕಾತಿ ವಿಷಯ ಇದೀಗ ಅಗೆದಷ್ಟು ಹೊಸ ಮುಖಗಳ ಬಂಧನಕ್ಕೆ ಕಾರಣವಾಗುತ್ತಿದೆ. ಈ ಅಕ್ರಮ ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಮತ್ತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಮೂವರಲ್ಲಿ ಒಬ್ಬರನ್ನು ಸಿಐಡಿ ಪೊಲೀಸರು ಧಾರವಾಡದಲ್ಲಿ ಬಂಧಿಸಿದ್ದಾರೆ. ಪಿಎಸ್ಐ ಪರೀಕ್ಷೆಯಲ್ಲಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ 6ನೇ ರ್ಯ್ಯಾಂಕ್ ಬಂದಿದ್ದ ಲಕ್ಕಪ್ಪ, 57ನೇ ರ‍್ಯಾಂಕ್ ಬಂದಿದ್ದ ನಾನ್ ಕರ್ನಾಟಕದ ಧಾರವಾಡದ ಶ್ರೀಶೈಲ ಬಿರಾದಾರ ಹಾಗೂ ಶ್ರೀಮಂತ ಸಪ್ತಾಪುರ ಎಂಬುವವರೇ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಪಿಎಸ್ಐ ಅಕ್ರಮ ನೇಮಕಾತಿಯ ಪ್ರಮುಖ ಆರೋಪಿ ಆರ್.ಡಿ ಪಾಟೀಲ ಅವರ ಜೊತೆ ಈ ಮೂವರೂ ಪ್ರಮುಖ ಆರೋಪಿಗಳು ನಂಟು ಹೊಂದಿದ್ದರು. ಸದ್ಯ ಬಂಧಿತರಾಗಿರುವ ಮೂರೂ ಜನ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಲಕ್ಕಪ್ಪ ತುಮಕೂರು ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದರೆ, ಶ್ರೀಶೈಲ ಬಿರಾದಾರ ಧಾರವಾಡ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದಾರೆ. ಶ್ರೀಮಂತ ಸಪ್ತಾಪುರ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಪರೀಕ್ಷೆ ಬರೆದಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/10/2022 10:53 pm