ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಖಾಕಿ ಕೈಗೆ ಸಿಕ್ಕಿಬಿದ್ದ ಖತರ್ನಾಕ್ ಕಳ್ಳರು

ಹುಬ್ಬಳ್ಳಿ: ದೇವಸ್ಥಾನ ಹುಂಡಿ, ಬಾರ್ ಹಾಗೂ ಮನೆಗಳನ್ನ ಮಾಡುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಉಣಕಲ್ ಯಲ್ಲಮ್ಮನ ಗುಡಿ ಸಮೀಪದ ನಿವಾಸಿ ಆನಂದ ಮಹದೇವಪ್ಪ ಹೂಗಾರ, ಧಾರವಾಡ ಮಣಕಿಲ್ಲಾದ ಹಸನ್ ಕಾಸೀಮಸಾಬ್ ಬೇಗ ಹಾಗೂ ಹುಬ್ಬಳ್ಳಿ ಕಾರಾಗೃಹದ ಬಳಿಯ ಬಸವರಾಜ ಫಕ್ಕೀರಪ್ಪ ಹುಡೇದ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 10 ಗ್ರಾಂ ಚಿನ್ನ, 60 ಗ್ರಾಂ, ಬೆಳ್ಳಿ ಹಾಗೂ 42 ಸಾವಿರ ರೂಪಾಯಿ ವಶಕ್ಕೆ ಪಡೆಯಲಾಗಿದ್ದು, ಒಟ್ಟು ಐದು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಇನ್ಸ್‌ಪೆಕ್ಟರ್ ರವಿಚಂದ್ರ ಡಿ.ಬಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐ ಕವಿತಾ ಎಸ್.ಎಂ, ಪ್ರೊಬೇಷನರಿ ಪಿಎಸ್ಐ ಸ್ವಾತಿ ಮುರಾರಿ, ಎಎಸ್ಐ ಎಂ.ಆರ್.ಮಲ್ಲಿಗವಾಡ, ಸಿಬ್ಬಂದಿಯಾದ ಶ್ರೀನಿವಾಸ ಯರಗುಪ್ಪಿ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಕೃಷ್ಣಾ ಮೊಟೆಬೆನ್ನೂರ, ಮಂಜುನಾಥ ಹಾಲವರ, ಪ್ರಕಾಶ ಕಲಗುಡಿ, ರೇಣು ಸಿಕ್ಕಲಗೇರ, ಮಾಬುಸಾಬ್ ಮುಲ್ಲಾ, ಆರೂಢ ಕರೆಣ್ಣನವರ, ಡಿ.ಎ.ಮಾಂಗ, ಆರ್.ಕೆ.ಬಡಂಕರ, ಎಂ.ಎಸ್.ಚಿಕ್ಕಮಠ, ರವಿ ಗೋಮಪ್ಪನವರ ಭಾಗವಹಿಸಿದ್ದರು.

Edited By : Vijay Kumar
Kshetra Samachara

Kshetra Samachara

09/10/2022 06:55 pm

Cinque Terre

49.26 K

Cinque Terre

3

ಸಂಬಂಧಿತ ಸುದ್ದಿ