ಹುಬ್ಬಳ್ಳಿ: ಪುಷ್ಪಾ ಪಟದಾರಿ ಆತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೆ ಇದೀಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗ್ತಿದ್ದು, ಜ್ಯೋತಿಷಿ ಮಾತು ನಂಬಿ, ಆತಂಕದಲ್ಲಿ ಪುಷ್ಪಾ ನೇಣಿಗೆ ಶರಣಾದರಾ? ಎಂಬ ಅನುಮಾನ ಮೂಡಿದೆ. ಇದಕ್ಕೆ ಪುಷ್ಟಿ ಕೊಡುವ ಹಾಗೆ ತನ್ನ ಸ್ನೇಹಿತೆಯ ಜೊತೆ ವಾಟ್ಸ್ ಆಪ್ ಮೂಲಕ ತನ್ನ ಭೀತಿಯನ್ನು ಪುಷ್ಪಾ ಹೇಳಿಕೊಂಡಿರುವ ಮೆಸೇಜ್ ಗಳು ಇದೀಗ ಜ್ಯೋತಿಷಿ ಹಾಗೂ ಆಂಟಿ ಕಡೆ ಕೈ ಮಾಡಿ ತೋರಿಸುತ್ತಿದೆ!
ಈಗಾಗಲೇ ಪುಷ್ಪಾ ಇಬ್ಬರು ಮಕ್ಕಳ ತಾಯಿಯಾಗಿದ್ದು, ಮತ್ತೆ ಗರ್ಭಿಣಿ ಕೂಡ ಆಗಿದ್ದರು. ಆದ್ರೆ, ಈ 3ನೇ ಮಗುವಿನಿಂದ ಜೀವಕ್ಕೆ ಕಂಟಕ ಇದೆ ಎಂದು ಪುಷ್ಪಾರಿಗೆ ಪರಿಚಯದ ಆಂಟಿ ಹೇಳಿದ್ರಂತೆ. ಈ ನಡುವೆಯೇ ಗಂಡ ದೀಪಕ್ ಪಟದಾರಿ ಕೊಲೆ ನಡೆದ ಹಿನ್ನೆಲೆಯಲ್ಲಿ ಪುಷ್ಪಾ ಮಾನಸಿಕವಾಗಿ ಕುಗ್ಗಿದ್ದರು.
ಗಂಡ ಕೊಲೆಯಾದ ನಂತರ ತನ್ನ ಗಂಡನ ಸಾವಿನ ನ್ಯಾಯಕ್ಕಾಗಿ ಪುಷ್ಪಾ ಸಾಕಷ್ಟು ಹೋರಾಟ ಮಾಡುತ್ತಿದ್ದರು. ಈ ಮಧ್ಯೆ ಆ ಜ್ಯೋತಿಷಿ ಹೇಳಿದ ಆ ಒಂದು ಮಾತಿನಿಂದ ಹೊರಗೆ ಬಾರದೆ ಪುಷ್ಪಾ ಸಂಕಟ ಪಡುತ್ತಿದ್ದರು. ಈ ಬಗ್ಗೆ ತನ್ನ ಸ್ನೇಹಿತೆ ಶಿಲ್ಪಾ ಜೊತೆ ವಾಟ್ಸ್ ಆಪ್ ಚಾಟಿಂಗ್ ಮತ್ತು ಸಂಭಾಷಣೆ ನಡೆಸಿದ್ದರು ಅಂತಾ ಮಾಧ್ಯಮದ ಮುಂದೆ ಶಿಲ್ಪಾ ಹೇಳಿದ್ದಾರೆ.
ಹಾಗಾದ್ರೆ, ಪುಷ್ಪಾರಿಗೆ 3ನೇ ಮಗುವಿನಿಂದ ಕಂಟಕ ಇದೆ ಎಂದು ಹೇಳಿದ ಆಂಟಿ ಯಾರು ? ಜೊತೆಗೆ ಮಗುವಿನಿಂದ ಕಂಟಕ ಇದೆ ಎಂದು ಆಂಟಿಗೆ ಹೇಳಿದ ಆ ಜ್ಯೋತಿಷಿ ಯಾರು? ಎಂಬ ರಹಸ್ಯವನ್ನು ಪೊಲೀಸರು ಭೇದಿಸಿ, ಪುಷ್ಪಾರ ಸಾವಿಗೆ ನ್ಯಾಯ ಕೊಡಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
-ವಿನಯ ರೆಡ್ಡಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/09/2022 02:28 pm