ಗ್ರಾಮ ಪಂಚಾಯತಿ ಸದಸ್ಯ ದೀಪಕ್ ಪಟದಾರಿ ಮರ್ಡರ್ ಕೇಸ್ ಕುರಿತಂತೆ ಸಿಐಡಿ ತನಿಖೆ ಚುರುಕುಗೊಳಿಸಿದ್ದು, ಇಂದು ಸಹ ದೀಪಕ್ ಕೊಲೆಯಲ್ಲಿ ಬಂಧಿತ ಪ್ರಮುಖ ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಹೌದು.. ಮೂರು ದಿನಗಳ ಕಾಲ ಬಂಧಿತ ಆರೋಪಿಗಳನ್ನು ಸಿ.ಐ.ಡಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ದೀಪಕ್ ಸಹೋದರ ಸಂಜಯ್ ಪಟದಾರಿಯನ್ನು ಹಾಗೂ ಮೃತ ದೀಪಕ ಪತ್ನಿ ಪುಷ್ಪಾ ಅವರನ್ನು ವಿಚಾರಣೆ ನಡೆಸಿರುವ ಅಧಿಕಾರಿಗಳು ಇಂದು ಬೆಳಿಗ್ಗೆ ಕಸಬಾ ಪೊಲೀಸ್ ಠಾಣೆಯಲ್ಲಿ ಡ್ರಿಲ್ ಮಾಡುತ್ತಿದ್ದಾರೆ.
ಜುಲೈ 4 ರಂದು ಗ್ರಾಪಂ ಸದಸ್ಯನನ್ನು ಹುಬ್ಬಳ್ಳಿ ತಾಲೂಕಿನ ರಾಯನಾಳ ಬಳಿ ಕೊಲೆ ಮಾಡಲಾಗಿತ್ತು. ಕಳೆದ ಒಂದು ವಾರದ ಹಿಂದೆ ದೀಪಕ್ ಕೊಲೆ ಕೇಸ್ ಸಿ.ಐ.ಡಿಗೆ ವರ್ಗಾವಣೆಯಾಗಿತ್ತು. ಈ ನಿಟ್ಟಿನಲ್ಲಿ ಹುಬ್ಬಳ್ಳಿಗೆ ಆಗಮಿಸಿದ ಸಿಐಡಿ ತಂಡ ತನಿಖೆ ಚುರುಕುಗೊಳಿಸಿದೆ.
ಹುಬ್ಬಳ್ಳಿಗೆ ಆಗಮಿಸಿರುವ ಆರು ಜನ ಅಧಿಕಾರಿಗಳ ಸಿ.ಐ.ಡಿ ತಂಡ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮಾಹಿತಿ ಸಂಗ್ರಹ ಮಾಡಿತ್ತು. ಅಲ್ಲದೇ ಕೊಲೆಯಾದ ಜಾಗ ರಾಯನಾಳಕ್ಕೂ ಹೋಗಿ ಪರಿಶೀಲನೆ ಮಾಡಿರೋ ಸಿಐಡಿ ಅಧಿಕಾರಿಗಳು, ಮೃತ ದೀಪಕ್ ಕೊಲೆಯ ಬಗ್ಗೆ ಎಲ್ಲ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/09/2022 12:12 pm