ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪೊಲೀಸ್ ಠಾಣೆಯಲ್ಲೇ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಹುಬ್ಬಳ್ಳಿ: ಯುವಕನೊಬ್ಬ ಪೊಲೀಸ್ ಠಾಣೆಯಲ್ಲಿಯೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನಿನ್ನೆ ಗುರುವಾರ ಸಾಯಂಕಾಲ ನಡೆದಿದೆ.

ಹಳೇ ಹುಬ್ಬಳ್ಳಿಯ ಇಂಡಿ ಪಂಪ್ ಸರ್ಕಲ್ ಬಳಿಯಲ್ಲಿನ ಬಿರಿಯಾನಿ ಹೌಸ್ ಮಾಲೀಕರ ಜೊತೆ ರಾಘವೇಂದ್ರ ಎಂಬ ಯುವಕನ ನಡುವೆ ಮಾತಿಗೆ ಮಾತು ಬೆಳೆದು ಅತಿರೇಕಕ್ಕೆ ಹೋದ ಪರಿಣಾಮ ಬಿರಿಯಾನಿ ಹೌಸ್ ಮಾಲೀಕರು ರಾಘವೇಂದ್ರನನ್ನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಆಗ ಪೊಲೀಸರು ಬಿರಿಯಾನಿ ಹೌಸ್ ಮಾಲಕರನ್ನು ಹಾಗೂ ರಾಘವೇಂದ್ರ ಎಂಬ ಯುವಕನನ್ನು ವಿಚಾರಣೆ ಮಾಡುತ್ತಿದ್ದಾಗ ಪೊಲೀಸರ ಮುಂದೆಯೇ ರಾಘವೇಂದ್ರ ಬ್ಲೇಡ್ ನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಅಲ್ಲೆ ಇದ್ದ ಹಿರಿಯ ಅಧಿಕಾರಿಗಳು ಅಲ್ಲಿಂದ ಕಾಲ್ಕಿತ್ತಿದ್ದು, ಗಾಯಗೊಂಡ ಯುವಕನನ್ನು ಬಿರಿಯಾನಿ ಹೌಸ್‌ನವರೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇಷ್ಟೆಲ್ಲ ಘಟನೆ ಪೊಲೀಸ್ ಠಾಣೆಯಲ್ಲಿ ನಡೆದರೂ ಆತ್ಮಹತ್ಯೆಗೆ ಯತ್ನಿಸಿದವನ ವಿರುದ್ಧ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸದೇ ಇರುವುದು ಹಲವು ಅನುಮಾಗಳಿಗೆ ಕಾರಣವಾಗಿದೆ.

Edited By : Nagaraj Tulugeri
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/09/2022 09:08 am

Cinque Terre

68.71 K

Cinque Terre

12

ಸಂಬಂಧಿತ ಸುದ್ದಿ