ಹುಬ್ಬಳ್ಳಿ: ಫೇಸ್‌ಬುಕ್ ಮೂಲಕ ನಗರದ ಯುವತಿಯೊಬ್ಬರನ್ನು ಸಂಪರ್ಕಿಸಿ ನೌಕರಿ ಆಫರ್ ಹೆಸರಿನಲ್ಲಿ ಮಾರ್ಕೆಟಿಂಗ್ ಹಾಗೂ ಕಮಿಷನ್ ಆಮಿಷ ಒಡ್ಡಿ 1,96,577 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಹಳೇ ಹುಬ್ಬಳ್ಳಿಯ ದೀಪಾ ಎಂಬುವರ ಫೇಸ್‌ಬುಕ್ ಖಾತೆಗೆ ಸೆ. 3ರಂದು ಅಪರಿಚಿತ ವ್ಯಕ್ತಿ 'ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ ಜಾಬ್ ಆಫರ್' ಎಂಬ ಜಾಹೀರಾತು ಕಳುಹಿಸಿದ್ದ. ನಂತರ ವಾಟ್ಸ್ ಆ್ಯಪ್ ಹಾಗೂ ಟೆಲಿಗ್ರಾಂ ಮೂಲಕ ಚಾಟಿಂಗ್ ಮಾಡಿ, ಲಿಂಕ್ ಒಂದನ್ನು ಕಳುಹಿಸಿದ್ದ. ಲಿಂಕ್ ಓಪನ್ ಮಾಡಿ ನೋಂದಣಿ ಮಾಡಿಕೊಂಡು, ರೀಚಾರ್ಜ್ ಮಾಡುವ ಮೂಲಕ ಮಾರ್ಕೆಟಿಂಗ್ ಮಾಡಿದರೆ ಕಮಿಷನ್ ನೀಡಲಾಗುವುದು ಎಂದು ಆಮಿಷ ತೋರಿಸಿದ್ದ.
ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮೂಲಕ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೀಪಾ ಪ್ರಕರಣ ದಾಖಲಿಸಿದ್ದಾರೆ.
Kshetra Samachara
12/09/2022 01:51 pm