ಕುಂದಗೋಳ : ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ಹಣ ದೋಚಿ ಪರಾರಿಯಾದ ಘಟನೆ ಕುಂದಗೋಳ ತಾಲೂಕಿನ ಹೊಸ ಹಂಚಿನಾಳ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಹೌದು ! ಹೊಸಹಂಚಿನಾಳ ಗ್ರಾಮದ ಶಿವಪ್ಪ ಹಣುಮಂತಪ್ಪ ಸಣ್ಣಮನಿ ಎಂಬುವವರ ಮನೆಗೆ ನುಗ್ಗಿದ ಕಳ್ಳರು 10 ಗ್ರಾಂ ಒಂದು ಬಂಗಾರದ ಚೈನ್, 5 ಗ್ರಾಂ ಬಂಗಾರದ ಜುಮುಕಿ, 5 ಗ್ರಾಂ ಬಂಗಾರದ ಎರೆಡು ಕಿವಿ ಓಲೆಗಳು, 90 ಗ್ರಾಂ ಮಕ್ಕಳ ಬೆಳ್ಳಿಯ ಸಾಮಗ್ರಿ ಸೇರಿದಂತೆ ಮನೆಯಲ್ಲಿಟ್ಟಿದ್ದ 60 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ಮಂಗಳವಾರ ಮನೆಗೆ ನುಗ್ಗಿದ ಕಳ್ಳರು ಮನೆಯ ಬಾಗಿಲು ಚಿಲಕ ಮುರಿದು ಸರಪಳಿ ಕಿತ್ತು ನಗದು, ಬಂಗಾರ,ಬೆಳ್ಳಿ ದೋಚಿ ಪರಾರಿಯಾಗಿದ್ದಾರೆ.ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
25/08/2022 03:59 pm