ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬಸ್ಸಿನ ಗ್ಲಾಸು ಒಡೆದು ಓಡುತ್ತಿದ್ದ ಯುವಕನಿಗೆ ಬಿತ್ತು ಗೂಸಾ

ಧಾರವಾಡ: ನಿರ್ವಾಹಕನೊಂದಿಗೆ ಕಿತ್ತಾಟ ಮಾಡಿ ಬಸ್ಸಿನಿಂದ ಇಳಿದು ಹೋಗುವಾಗ ಬಸ್ಸಿನ ಹಿಂಬದಿ ಗ್ಲಾಸು ಒಡೆದು ಓಡುತ್ತಿದ್ದ ವ್ಯಕ್ತಿಯೋರ್ವನನ್ನು ಹಿಡಿದ ಸಾರ್ವಜನಿಕರು ಹಾಗೂ ಬಸ್ಸಿನ ಚಾಲಕ, ನಿರ್ವಾಕರು ಆ ಯುವಕನಿಗೆ ಸಾರ್ವಜನಿಕವಾಗಿಯೇ ಗೂಸಾ ಕೊಟ್ಟಿದ್ದಾರೆ.

ಇನ್ನು ಈ ಘಟನೆ ನಡೆದದ್ದು ಧಾರವಾಡದ ಶಿವಾಜಿ ಸರ್ಕಲ್ ಬಳಿ ನಡೆದಿದೆ. ನಿರ್ವಾಹಕನೊಂದಿಗೆ ಕಿತ್ತಾಟ ಮಾಡಿಕೊಂಡು, ಇಳಿದು ಹೋಗುವ ಸಂದರ್ಭದಲ್ಲಿ ಆ ವ್ಯಕ್ತಿ ಹಿಂಬದಿಯಿಂದ ಬಸ್ಸಿಗೆ ಕಲ್ಲು ಎಸೆದಿದ್ದಾನೆ.

ಇದರಿಂದ ಬಸ್ಸಿನ ಹಿಂಬದಿ ಗ್ಲಾಸು ಒಡೆದುಹೋಗಿದೆ. ಅಲ್ಲದೇ ಹಿಂದೆ ಕುಳಿತಿದ್ದ ಪ್ರಯಾಣಿಕರೊಬ್ಬರ ತಲೆಗೆ ಕಲ್ಲು ಸಹ ತಾಕಿದೆ. ಇದರಿಂದ ಆಕ್ರೋಶಗೊಂಡ ಚಾಲಕ, ನಿರ್ವಾಹಕ ಹಾಗೂ ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರು ಆತನನ್ನು ಬೆನ್ನತ್ತಿ ಹಿಡಿದು ತಂದಿದ್ದಾರೆ. ನಂತರ ಸಾರ್ವಜನಿಕವಾಗಿಯೇ ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/08/2022 07:30 pm

Cinque Terre

119.11 K

Cinque Terre

5

ಸಂಬಂಧಿತ ಸುದ್ದಿ