ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮುಕ್ಕಲ್ಲ ಗ್ರಾಮದಲ್ಲಿ ಧ್ವಜಾರೋಹಣ ವೇಳೆ ಎಡವಟ್ಟು..!

ಕಲಘಟಗಿ ತಾಲೂಕಿನ ಮುಕ್ಕಲ್ಲ ಗ್ರಾಮದಲ್ಲಿ ಧ್ವಜಾರೋಹಣದ ವೇಳೆ ಎಡವಟ್ಟು ಆಗಿದೆ. ಎರಡು ಪ್ರತ್ಯೇಕ ಸ್ಥಳದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದ್ದು, ಮೊದಲಿಗೆ ಮುಕ್ಕಲ್ಲ ಸರ್ಕಾರಿ ಅನುದಾನಿತ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ರಾಷ್ಟ್ರ ಧ್ವಜ ಉಲ್ಟಾ ಹಾರಿಸಲಾಗಿದೆ. ಈ ಧ್ವಜಾರೋಹಣ ಮಾಡಿದ ಶಾಲಾ ಅಧ್ಯಕ್ಷ ಮತ್ತು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಲಿಂಗರೆಡ್ಡಿ ಎಂಬುವರು ಇಂತಹ ಎಡವಟ್ಟು ಮಾಡಿದ್ದು, ನಂತರ ಧ್ವಜವನ್ನು ಕೆಳಗೆ ಇಳಿಸಿ ಮತ್ತೆ ಸರಿಯಾಗಿ ಧ್ವಜಾರೋಹಣ ಮಾಡಲಾಗಿದೆ.

ಮತ್ತೊಂದಡೆ ನೆಹರು ಯುವಕ ಮಂಡಳ ಮುಂದೆ ಧ್ವಜಾರೋಹಣ ಮಾಡುವ ವೇಳೆ ರಾಷ್ಟ್ರಧ್ವಜ ಕಳಚಿ ಕೆಳಗೆ ಬಿದ್ದಿರುವ ಸಂಗತಿ ನಡೆದಿದೆ. ಈ ಎರಡು ಧ್ವಜಾರೋಹಣವನ್ನು ಮಾಡಿದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಲಿಂಗರೆಡ್ಡಿಯವರ ಮೇಲೆ ಸಾರ್ವಜನಿಕರಿಂದ ಆಕ್ರೋಶಗೊಂಡಿದ್ದಾರೆ. ಈ ಎಡವಟ್ಟಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

15/08/2022 01:36 pm

Cinque Terre

73.28 K

Cinque Terre

3

ಸಂಬಂಧಿತ ಸುದ್ದಿ