ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜೈಲು ಸೇರಿದ ಮಗ: ಮನನೊಂದ ತಾಯಿ ಆತ್ಮಹತ್ಯೆ

ಹುಬ್ಬಳ್ಳಿ: ನಗರದ ಉಣಕಲ್ ಕೆರೆಯಲ್ಲಿ ಅಪರಿಚಿತ ಮಹಿಳೆಯ ಶವದ ಗುರುತು ಪತ್ತೆಯಾಗಿದ್ದಷ್ಟೇ ಅಲ್ಲದೇ, ಮಹಿಳೆ ಆತ್ಮಹತ್ಯೆಗೆ ಕಾರಣವನ್ನು ಕೂಡಾ ಇದೀಗ ಪೊಲೀಸರು ಭೇದಿಸಿದ್ದಾರೆ.

ಉಣಕಲ್ ಕೆರೆಯಲ್ಲಿ ಪತ್ತೆಯಾದ ಮಹಿಳೆಯ ಶವ ಗೋಪನಕೊಪ್ಪದ ಧ್ಯಾಮವ್ವ ಅಲಿಯಾಸ್ ಭಾರತಿ ಪಾಟೀಲ್ ಅಂತಾ ತಿಳಿದುಬಂದಿದೆ.

ಧ್ಯಾಮವ್ವನ ಮಗ ವಿನಾಯಕಗೌಡ ಕಳೆದ 10 ದಿನಗಳ ಹಿಂದೆ ಉದಯನಗರದಲ್ಲಿ ನಡೆದ ಹೊಡೆದಾಟದ ಪ್ರಕರಣದಲ್ಲಿ ಭಾಗಿಯಾಗಿದ್ದ. ಈತನನ್ನು ಪ್ರಕರಣದ ಪ್ರಮುಖ ಆರೋಪಿಯನ್ನಾಗಿ ಮಾಡಿ ಕೇಶ್ವಾಪುರ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಇದನ್ನೇ ಮನಸ್ಸಿಗೆ ಹಚ್ಚಿಕೊಂಡ ಧ್ಯಾಮವ್ವ ಕಳೆದ ಒಂದು ವಾರದಿಂದ ಮಾನಸಿಕವಾಗಿ ತುಂಬಾ ನೊಂದಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ಯಾರಿಗೂ ಹೇಳದೆ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಇದೀಗ ಲಭ್ಯವಾಗಿದೆ.

Edited By : Manjunath H D
Kshetra Samachara

Kshetra Samachara

30/07/2022 01:13 pm

Cinque Terre

34.83 K

Cinque Terre

4

ಸಂಬಂಧಿತ ಸುದ್ದಿ