ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶ್ರೀಗಂಧದ ಮರ ಕದಿಯುತ್ತಿದ್ದ ಕಳ್ಳರ ಹಡೆಮುರಿ ಕಟ್ಟಿದ ಆರ್‌ಪಿಎಫ್ ಪೊಲೀಸ್‌

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡದಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಖದೀಮರನ್ನು ಆರ್‌ಪಿಎಫ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಆರ್‌ಪಿಎಫ್ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ನೇತೃತ್ವದ ವಿಶೇಷ ತಂಡ ಧಾರವಾಡದ ರೈಲ್ವೆ ಮೈದಾನ ಹಾಗೂ ವಿವಿಧ ಸ್ಥಳಗಳಲ್ಲಿ ನಿರಂತರವಾಗಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಮರಗಳ್ಳರನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಈ ಮರಗಳ್ಳರು ತಡರಾತ್ರಿ ವೇಳೆಯಲ್ಲೇ ಕಳ್ಳತನ ಮಾಡುತ್ತಿದ್ದರು. ಆರೋಪಿಗಳು ಮರಗಳನ್ನು ಕಡಿಯುವುದು ಮತ್ತು ಕೊಂಡುಯ್ಯುವುದನ್ನು ಮಾಹಿತಿಯನ್ನು ಪಡೆದ ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಕುರಿತು ಹು-ಧಾ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೆಲವು ಪ್ರಕರಣಗಳು ದಾಖಲಾಗಿವೆ. ರೈಲ್ವೆ ಆಸ್ತಿ ಕಾಯ್ದೆಯಡಿ ದಾಖಲಾದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಆರ್‌ಪಿಎಫ್ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

Edited By : Vijay Kumar
Kshetra Samachara

Kshetra Samachara

29/07/2022 11:29 pm

Cinque Terre

21.96 K

Cinque Terre

1

ಸಂಬಂಧಿತ ಸುದ್ದಿ