ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬೈಕ್ ಕದಿಯುತ್ತಿದ್ದ ಐವರು ಅಪ್ರಾಪ್ತರು ಅಂದ‌ರ್

ಹುಬ್ಬಳ್ಳಿ: ದ್ವಿಚಕ್ರ ವಾಹನ ಹಾಗೂ ಸೈಕಲ್‌ಗಳನ್ನು ಕದಿಯುತ್ತಿದ್ದ ಐವರು ಅಪ್ರಾಪ್ತರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಆನಂದನಗರ ಕ್ರಾಸ್ ಬಳಿ ಬಂಧಿಸಿದ್ದಾರೆ. ಆರೋಪಿತರಿಂದ ಮೂರು ಬೈಕ್, ನಾಲ್ಕು ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಎರಡು ಬೈಕ್‌ಗಳಲ್ಲಿ ಆನಂದನಗರ ಕ್ರಾಸ್ ಬಳಿ ವಿದ್ಯಾರ್ಥಿಗಳು ಹೊರಟಿದ್ದರು. ಈ ವೇಳೆ ಅವರನ್ನು ತಡೆದು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ವಿಚಾರಿಸಿದ್ದಾರೆ. ದಾಖಲೆಗಳನ್ನು ನೀಡದೇ ಮತ್ತು ಸಮರ್ಪಕ ಉತ್ತರವನ್ನೂ ನೀಡದ ಹಿನ್ನೆಲೆಯಲ್ಲಿ ಠಾಣೆಗೆ ಕರೆತಂದು ಪರಿಶೀಲಿಸಿದ್ದಾರೆ. ಈ ವೇಳೆ ಕಳ್ಳತನದ ವಿಷಯ ಗೊತ್ತಾಗಿದೆ. ಈ ತಂಡದಲ್ಲಿ ಕೇವಲ 12, 13 ವರ್ಷದ ಇಬ್ಬರು ಬಾಲಕರು, 16 ವರ್ಷದ ಒಬ್ಬ ಹಾಗೂ 17 ವರ್ಷದ ಇಬ್ಬರಿದ್ದಾರೆ. ಆರೋಪಿತರನ್ನು ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

20/07/2022 12:40 pm

Cinque Terre

23.61 K

Cinque Terre

1

ಸಂಬಂಧಿತ ಸುದ್ದಿ