ಹುಬ್ಬಳ್ಳಿ: ಹಳಿಯಾಳದ ಪ್ರೇಮಿಗಳಿಬ್ಬರು ದಾರುಣವಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಜರುಗಿದೆ.
ಕಳೆದ ಶುಕ್ರವಾರ ಹಳಿಯಾಳ ಪಟ್ಟಣದ ಜ್ಯೋತಿ ಸುರೇಶ್ ಅಂತ್ರೊಳಕರ್ ಹಾಗೂ ರಿಕೇಶ್ ಸುರೇಶ್ ಮಿರಶಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಚಿಕೆತ್ಸೆ ಫಲಕಾರಿ ಆಗದೆ ಇಂದು ಮುಂಜಾನೆ ಕಿಮ್ಸ್ ನಲ್ಲಿ ಸಾವನ್ನಪ್ಪಿದ್ದಾರೆ.
ಜ್ಯೋತಿ ಹಾಗೂ ರಿಕೇಶ್ ಕಾಲೇಜ್ ದಿನಗಳಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅಲ್ಲದೆ ಇತ್ತೀಚಿಗೆ ಜ್ಯೋತಿ ಕುಟುಂಬಸ್ಥರು ಬೇರೊಂದು ಯುವಕನ ಜೊತೆ ಅವಳನ್ನ ಮದುವೆ ಮಾಡಿಕೊಟ್ಟಿದ್ದರು.
ತಾವಿಬ್ಬರೂ ದೂರ ಆಗಿದ್ದೇವೆ. ನಮ್ಮ ಪ್ರೇಮ ವಿಫಲವಾಗಿದೆ ಎಂದು ನೊಂದಿದ್ದ ಪ್ರೇಮಿಗಳಿಬ್ಬರು ಸಾಯಲು ನಿರ್ಧರಿಸಿ ಇಂದು ಅಂತಿಮವಾಗಿ ಜೊತೆಯಲ್ಲಿ ಸಾವಿನೊಂದಿಗೆ ಪ್ರಯಾಣ ಬೆಳೆಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/07/2022 05:49 pm