ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಕ್ರಮವಾಗಿ ಗ್ಯಾಸ್ ವರ್ಗಾವಣೆ; ಓರ್ವ ಅರೆಸ್ಟ್

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಮಸೀದಿ ಬಳಿ, ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ನಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗೆ ಅಕ್ರಮವಾಗಿ ಅನಿಲ ವರ್ಗಾವಣೆ ಮಾಡುತ್ತಿದ್ದ ಅಡ್ಡೆ ಮೇಲೆ ಕಸಬಾಪೇಟೆ ಪೊಲೀಸರು ದಾಳಿ ಮಾಡಿ ಓರ್ವನನ್ನು ಬಂಧಿಸಿದ್ದಾರೆ.

ಮೊಹಮ್ಮದ್ ಮದರಂಗಿ ಬಂಧಿತ ಆರೋಪಿ. ಈತನಿಂದ ಅಂದಾಜು 1,32,400 ರೂ. ಮೌಲ್ಯದ ಅನಿಲ ತುಂಬಿದ ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ತಲಾ 6 ಸಿಲಿಂಡರ್ ಹಾಗೂ ಗೃಹ ಬಳಕೆಯ 13 ಮತ್ತು ವಾಣಿಜ್ಯ ಬಳಕೆಯ 19 ಖಾಲಿ ಸಿಲಿಂಡರ್, 8 ರೆಗ್ಯುಲೇಟರ್, ಒಂದು ತೂಕದ ಯಂತ್ರ ವಶಪಡಿಸಿಕೊಳ್ಳಲಾಗಿದೆ. ಪಡಿತರ ಇಲಾಖೆಯ ಆಹಾರ ನಿರೀಕ್ಷಿಕರು ಕಸಬಾಪೇಟೆ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

18/07/2022 11:24 am

Cinque Terre

25.15 K

Cinque Terre

0

ಸಂಬಂಧಿತ ಸುದ್ದಿ