ಹುಬ್ಬಳ್ಳಿ: ಗ್ಯಾಸ್ ಸಿಲಿಂಡರ್ ವಿಚಾರಕ್ಕೆ ದಾಯಾದಿಗಳ ನಡುವೆ ಕಲಹ ಏರ್ಪಟ್ಟು ಓರ್ವನಿಗೆ ಚಾಕು ಹಾಗೂ ಸೆಂಟ್ರಿಂಗ್ ಗನ್‌ನಿಂದ ಹಲ್ಲೇ ಮಾಡಿದ ಘಟನೆ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಡಗೇರಿ ಹಾಲ್ ಬಳಿ ನಡೆದಿದೆ.
ಮುನ್ನಾ ಎಂಬಾತ ಕಸ್ತೂರಿ ಬಾ ನಗರದಲ್ಲಿರುವ ತನ್ನ ತಾಯಿಯ ಮನೆಯಲ್ಲಿನ ಗ್ಯಾಸ್ ಸಿಲಿಂಡರ್ ತೆಗೆದುಕೊಂಡು ಹೋಗಲು ಬಂದಾಗ ತಾಯಿಯ ಜೊತೆ ಮುನ್ನಾ ಜಗಳ ಪ್ರಾರಂಭ ಮಾಡಿದ್ದಾನೆ. ಅಲ್ಲೇ ಇದ್ದ ಮುನ್ನಾನ ಅಣ್ಣ ರಿಯಾಜ್ ಹಾಗೂ ಆತನ ಭಾವ ಅಸ್ನರ್ ಎಂಬವರು ಮುನ್ನಾಗೆ ಬುದ್ಧಿವಾದ ಹೇಳಲು ಮುಂದಾಗಿದ್ದಾರೆ.
ಆದ್ರೆ ಕುಡಿದ ಮತ್ತಿನಲ್ಲಿದ್ದ ಮುನ್ನಾ ತನ್ನ ಅಣ್ಣ ಹಾಗೂ ಭಾವನ ಮೇಲೆ ಹಲ್ಲೇ ಮಾಡಲು ಮುಂದಾದಾಗ,ರಿಯಾಜ್ ಹಾಗೂ ಅಸ್ನರ್ ಚಾಕು ಹಾಗೂ ಸೆಂಟ್ರಿಂಗ್ ಗನ್ ನಿಂದ ಮುನ್ನಾ ಮೇಲೆ ಹಲ್ಲೆ ಮಾಡಿದ್ದಾರೆ. ಚಾಕು ಇರಿತದಿಂದ ಗಾಯಗೊಂಡ ಮುನ್ನಾನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಈ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
16/07/2022 07:28 am