ಹುಬ್ಬಳ್ಳಿ: ಬಣ್ಣ ಹಚ್ಚಲು ಬಂದು ವ್ಯಕ್ತಿಯೋರ್ವ ಮನೆಯಲ್ಲಿದ್ದ ಹಣ, ಚಿನ್ನವನ್ನು ಕದ್ದು ಪರಾರಿಯಾದ ಪ್ರಕರಣ ಹಳೇ ಹುಬ್ಬಳ್ಳಿಯ ಇಂದಿರಾನಗರದ ಶ್ರೀಧರ ತಲಪೂರ ಎಂಬುವರ ಮನೆಯಲ್ಲಿ ನಡೆದಿದೆ.
ಈ ಖದೀಮ ಮನೆಯಲ್ಲಿದ್ದ 1.40 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ದೂಚಿಕೊಂಡು ಹೋಗಿದ್ದಾನೆ ಎಂಬ ಪ್ರಕರಣ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬೆಟದೂರಿನಿಂದ ಬಂದಿದ್ದ ವ್ಯಕ್ತಿ ಬಣ್ಣ ಹಚ್ಚುವ ಕೆಲಸಕ್ಕೆ ಬಂದಿದ್ದು, ಮನೆಯಲ್ಲಿದ 80 ಸಾವಿರ ರೂ. ಮೌಲ್ಯದ 10.5 ಗ್ರಾಂ ಬಂಗಾರ ನಕ್ಲೇಸ್ ಮತ್ತು 60 ಸಾವಿರ ರೂ. ಮೌಲ್ಯದ ನಕ್ಲೇಸ್ ಕಳ್ಳತನ ಮಾಡಿ ಹೋಗಿದ್ದಾನೆ. ಈ ವಿಷಯ ತಿಳಿದು ಅವನಿಗೆ ಕರೆ ಮಾಡಿದರೆ ಮೊಬೈಲ್ ಸ್ವೀಚ್‌ಆಫ್ ಬರುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Kshetra Samachara
09/07/2022 11:13 am