ಹುಬ್ಬಳ್ಳಿ: ಚಂದ್ರಶೇಖರ ಗುರೂಜಿಯವರ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಅಂತಿಮ ದರ್ಶನ ಪಡೆಯಲು ಬೆಳಗಾವಿ ಜಿಲ್ಲೆಯ ನಿಡಸೂಸಿಯ ಸಂಸ್ಥಾನಮಠದ ಶಿವಲಿಂಗಶ್ವರ ಸ್ವಾಮೀಜಿ ಆಗಮಿಸಿದ್ದು, ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲಾಗಿದೆ.
ಹೌದು.ಸ್ವಾಮೀಜಿ ಸಹೋದರನ ಹಿರಿಯ ಮಗ ಸಂತೋಷ್ ನಿಂದ ವಿಧಿವಿಧಾನ ಮಾಡಲು ನಿರ್ಧಾರ ಮಾಡಲಾಗಿದೆ. 10 ಜನ ಸ್ವಾಮಿಗಳಿಂದ ಪೂಜೆ ಮಾಡಲಿದ್ದಾರೆ. ಬಳಿಕ ಪತ್ನಿ ಅಂಕಿತಾ ಅವರ ಮಾಂಗಲ್ಯ ಬಳೆ ತೆಗೆಸಿ ಗುರೂಜಿ ಮೃತ ದೇಹಕ್ಕೆ ಪೂಜೆ ಮಾಡಲಾಗುವುದು.
ಇನ್ನೂ ಪಂಚಾಕ್ಷರಿ ಮಂತ್ರಗಳನ್ನು ಹೇಳಿ, ಮಂಗಳಾರತಿ ಹೇಳಿದ ಬಳಿಕ ಮೃತದೇಹದ ಹಣೆಗೆ ವಿಭೂತಿ ಧಾರಣೆ ಮಾಡಿ ಅವರ ಪಾದದ ಮೆಲೆ ಸ್ವಾಮಿಜಿಗಳು ಪಾದ ಇಟ್ಟು ಪೂಜೆ ಮಾಡಿ ಅಷ್ಟ ದಿಕ್ಕುಗಳಲ್ಲಿ ಮಹಾಮಂತ್ರ ಬರೆದು ಇಡಲಾಗಿದೆ. ಕಡೆಯದಾಗಿ ಪುಷ್ಪಾರ್ಚನೆ ಮಾಡಿ ವಿಧಾನ ಅಂತ್ಯ ಮಾಡಲಾಗುವುದು.
Kshetra Samachara
06/07/2022 03:37 pm