ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ಯಾಂಕ್ ಉದ್ಯೋಗಿಗೆ 10 ಲಕ್ಷ ರೂ. ವಂಚನೆ: ವಿದ್ಯಾವಂತರಿಗೆ ಹೀಗಾದರೇ ಅವಿದ್ಯಾವಂತರ ಗತಿ ಏನು...?

ಹುಬ್ಬಳ್ಳಿ: ಕ್ರಿಪ್ಲೋ ಕರೆನ್ಸಿ ಟ್ರೇಡಿಂಗ್ ವ್ಯವಹಾರ ಮಾಡುವ ಮೂಲಕ ಹೆಚ್ಚು ಹಣ ಗಳಿಸಬಹುದು ಎಂದು ಆಸೆ ತೋರಿಸಿ ನಗರದ ಬ್ಯಾಂಕ್ ಉದ್ಯೋಗಿ ಒಬ್ಬರಿಂದ 10 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಹೌದು..ಇಲ್ಲಿನ ಕೇಶ್ವಾಪುರ ಶಾಂತಿನಗರದ ಸೌಮ್ಯ ಎಂಬುವರು ವಂಚನೆಗೀಡಾದವರು. ಜು. 2ರಂದು ಸೌಮ್ಯ ಅವರು ಇನ್ ಸ್ಟಾಗ್ರಾಮ್ ನೋಡುತ್ತಿದ್ದಾಗ ಜಾಹೀರಾತೊಂದು ಕಂಡಿತ್ತು. ಕ್ರಿಪ್ಲೋ ಕರೆನ್ಸಿ ಟ್ರೇಡಿಂಗ್ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ವಿವರಿಸಲಾಗಿತ್ತು. ಇದನ್ನು ನಂಬಿದ ಸೌಮ್ಯ ಜಾಹೀರಾತು ನೀಡಿದವರನ್ನು ಸಂಪರ್ಕಿಸಿದ್ದರು.

ವಂಚಕರು ಇವರ ಹೆಸರಲ್ಲಿ 'ಟ್ರೇಡ್ ಸಿಗ್ನಲ್' ಎಂಬ ವ್ಯವಹಾರದ ಖಾತೆ ತೆರೆದು, ಅವರಿಂದ 50 ಸಾವಿರ ರೂ. ಹೂಡಿಕೆ ಮಾಡಿಸಿಕೊಂಡಿದ್ದರು. ಅದಕ್ಕೆ ಲಾಭ ಸೇರಿಸಿ 6,50,553 ರೂ.ಗಳನ್ನು ಖಾತೆಯಲ್ಲಿ ತೋರಿಸಿದ್ದರು. ಆ ಹಣವನ್ನು ಬಿಡಿಸಿಕೊಳ್ಳಬೇಕೆಂದರೆ, ಖಾತೆಯನ್ನು ಅಪ್ಗ್ರೇಡ್ ಮಾಡಬೇಕು ಎಂದು ಮತ್ತೆ 2.5 ಲಕ್ಷ ರೂ. ವರ್ಗಾಯಿಸಿಕೊಂಡಿದ್ದರು. ಹೀಗೆ ಇಲ್ಲಸಲ್ಲದ ಕಾರಣ ಹೇಳಿ ಬರೋಬ್ಬರಿ 10 ಲಕ್ಷ ರೂ. ವರ್ಗಾಯಿಸಿಕೊಂಡಿದ್ದರು. ಇನ್ನೂ ಹೆಚ್ಚು ಹಣ ಹಾಕಿದರೆ ವಿತ್ಡ್ರಾ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

05/07/2022 09:21 am

Cinque Terre

46.76 K

Cinque Terre

0

ಸಂಬಂಧಿತ ಸುದ್ದಿ