ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಅಭಿವೃದ್ಧಿ ಹೆಸರಲ್ಲಿ ಅಕ್ರಮವಾಗಿ ನಡೆಯುತ್ತಿದೆಯಾ ಗಣಿಗಾರಿಕೆ?

ಅಳ್ನಾವರ: ಕಳೆದೆರಡು ವರ್ಷಗಳ ಹಿಂದೆ ಸುರಿದ ಅಕಾಲಿಕ ಮಳೆಗೆ ಅಳ್ನಾವರ ತಾಲ್ಲೂಕು ಅಕ್ಷರಶಃ ನಿಂತ ನೀರಾಗಿತ್ತು. ಹುಲಿಕೇರಿ ಇಂದಿರಮ್ಮನ ಕೆರೆ ತಡೆ ಗೋಡೆ ಒಡೆದು ನೂರಾರು ರೈತರ ಬದುಕನ್ನು ಬೀದಿಗೆ ಬರುವಂತೆ ಮಾಡಿತ್ತು. ಆ ನಿಟ್ಟಿನಲ್ಲಿ ಇದೀಗ ಹುಲಿಕೇರಿ ಇಂದಿರಮ್ಮನ ಕೆರೆ ತಡೆ ಗೋಡೆ ಕಾರ್ಯ ನಡೆದಿದೆ. ಆದರೆ ಅಲ್ಲಿನ ಕೆಲವರು ಅಲ್ಲಿದ್ದ ಬೆಲೆ ಬಾಳುವ ಕಲ್ಲುಗಳನ್ನ ದೇವಸ್ಥಾನಕ್ಕೆಂದು ಹೇಳಿ ಸ್ಥಳೀಯರಿಗಷ್ಟೇ ಅಲ್ಲದೆ ಬೇರೆ ಊರಿಗೂ ಸಹ ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾರೆ.

ಹೀಗಂತ ಆರೋಪ ಮಾಡ್ತಾಯಿರೋದು ಅಲ್ಲಿನ ಸಾರ್ವಜನಿಕರು.ಅಭಿವೃದ್ಧಿ ಹೆಸರಿನಲ್ಲಿ ಗಣಿಗಾರಿಕೆ ಮಾಡುತ್ತಿರುವುದು 'ಸರ್ವೋದಯ ಸಮಗ್ರ ಕೆರೆ ಬಳದಾರರ ಸಂಘ ಹುಲಿಕೇರಿ' ಅಧ್ಯಕ್ಷ ಶಿವಾಜಿ ಡೊಳ್ಳಿನ. ಹನ್ನೊಂದು ಸದಸ್ಯರನ್ನು ಒಳಗೊಂಡ ಈ ಸಂಘ ಸರಕಾರದಿಂದ ಮಾನ್ಯತೆ ಪಡೆದಿದ್ದಂತೂ ಅಲ್ಲ. ತಮಗೆ ಬೇಕಾಗಿ ತಾವೇ ನಿರ್ಮಾಣ ಮಾಡಿಕೊಂಡ ಸಂಘ. ಇದೀಗ ಇದೇ ಸಂಘದ ಹೆಸರು ಹೇಳಿಯೇ ಗಣಿಗಾರಿಕೆ ನಡೆಸಲಾಗುತ್ತಿದೆ.

ಹಾಗಾದರೆ ಇದನ್ನ ಕೇಳುವವರು ಯಾರು ಇಲ್ಲವಾ? ಬೆಲೆ ಬಾಳುವ ಕಲ್ಲುಗಳನ್ನ ಅಭಿವೃದ್ಧಿಗಾಗಿ ಬಳಸದೆ ಹಣಕ್ಕಾಗಿ ಮಾರಾಟ ಮಾಡುವುದು ಎಷ್ಟರ ಮಟ್ಟಿಗೆ ಸಮಂಜಸ? ಸಂಬಂಧ ಪಟ್ಟ ಅಧಿಕಾರಿಗಳು ಇದನ್ನ ಪರಿಶೀಲಿಸಬೇಕು. ಅಕ್ರಮವಾಗಿ ನಡೆಸುತ್ತಿರುವ ಈ ಹೀನ ಕೃತ್ಯಕ್ಕೆ ತಡೆಯೊಡ್ಡಬೇಕು ಎಂಬುದು ಸಾರ್ವಜನಿಕರ ಆಶಯ.

-ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್ ಅಳ್ನಾವರ.

Edited By : Shivu K
Kshetra Samachara

Kshetra Samachara

21/06/2022 08:03 am

Cinque Terre

70.26 K

Cinque Terre

1

ಸಂಬಂಧಿತ ಸುದ್ದಿ