ಹುಬ್ಬಳ್ಳಿ: ನಗರದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವ್ಯಕ್ತಿಯೋರ್ವ ಕಾಲ್ ಮಾಡಿ ವಿದ್ಯುತ್ ಬಿಲ್ ಅಪ್ಲೇಟ್ ಮಾಡುವುದಾಗಿ ನಂಬಿಸಿ ಬರೋಬ್ಬರಿ 1.90 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಗೋಕುಲ ರೋಡ್ ನಿವಾಸಿ ಸುಧೀರ ನಾಯ್ಕ ಎಂಬುವರಿಗೆ ಜೂ. 5ರಂದು ಸುಬ್ರಮಣ್ಯ ಎಂಬಾತ ಕರೆ ಮಾಡಿದ್ದ. ಈ ವೇಳೆ ವಿದ್ಯುತ್ ಬಿಲ್ ಅಪ್ಡೇಟ್ ಮಾಡುತ್ತೇನೆಂದು ನಂಬಿಸಿ, ಕ್ವಿಕ್ ಸಪೋರ್ಟ್ ಆ್ಯಪ್ ಡೌನ್‌ಲೋಡ್ ಮಾಡಿಸಿ ಇದರ ಸಹಾಯದಿಂದ ಕ್ರೆಡಿಟ್ ಕಾರ್ಡ್ ಹಾಗೂ ಇತರ ಮಾಹಿತಿ ಪಡೆದು ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
11/06/2022 10:54 am