ಹುಬ್ಬಳ್ಳಿ: ಕಳೆದ 4 ದಿನಗಳ ಹಿಂದೆ ಗುಟ್ಕಾ ಕೊಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮೆಹಬೂಬ್ ಎಂಬಾತನನ್ನು ಗೌಸ್ ಕೊಲೆಗೈದಿದ್ದ ಕಿರಾತಕನನ್ನು ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿಯ ಆನಂದನಗರದಲ್ಲಿ ವ್ಯಕ್ತಿಯೋರ್ವನಿಗೆ ರೌಡಿ ಶೀಟರ್ ಚಾಕು ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೆಹಬೂಬ್ ಕಳಸದ ( 23 ) ಎಂಬಾತನನ್ನು ಕೊಲೆಗೈದಿದ್ದ ಆರೋಪಿ ಗೌಸ ಮೊದ್ದೀನ್ ತಹಶಿಲ್ದಾರ ಎಂಬಾತನನ್ನು ಪೊಲೀಸರು ಮಾಹಿತಿ ಕಲೆ ಹಾಕಿ ಖೆಡ್ಡಾಗೆ ಕೆಡವಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದ ಈತ ಪೊಲೀಸರಿಗೆ ಸಿನಿಮಯ ರೀತಿಯಲ್ಲಿ ಚಳ್ಳೆಹಣ್ಣು ತಿನ್ನಿಸಿದ್ದು, ನಿರಂತರ ಮಾಹಿತಿ ಕಲೆ ಹಾಕುತ್ತಿದ್ದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
Kshetra Samachara
29/05/2022 12:17 pm