ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸರ್ಕಾರಿ ವಾಹನಗಳೇ ಟಾರ್ಗೆಟ್: ಕಲ್ಲು ತೂರಾಟ ಹೊಸ ಟ್ರೆಂಡ್ ಮಾಡಿಕೊಂಡ ಪುಂಡರು!

ಹುಬ್ಬಳ್ಳಿ: ಅದು ವಾಣಿಜ್ಯನಗರಿ ಖ್ಯಾತಿಯ ನಗರ. ಈ ನಗರದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಗಲಾಟೆಗಳು ನಡೆಯುತ್ತಲೇ ಇದೆ. ಆದರೆ ಗಲಾಟೆಯಲ್ಲಿ ಸರ್ಕಾರಿ ವಾಹನಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಅಷ್ಟಕ್ಕೂ ಯಾಕೆ ಸರ್ಕಾರದ ವಾಹನಗಳ ಮೇಲೆ ಇಷ್ಟು ದ್ವೇಷ ಅಂತೀರಾ ಈ ಸ್ಟೋರಿ ನೋಡಿ.

ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದ್ದ ಹಳೆ ಹುಬ್ಬಳ್ಳಿಯ ಕೋಮು ಗಲಭೆ ಪ್ರಕರಣ ಸದ್ಯ ಶಾಂತವಾಗಿದೆ.‌ ವಾಣಿಜ್ಯನಗರಿಯಲ್ಲಿ ಎಲ್ಲವೂ ಈಗ ಸಹಜ ಸ್ಥಿತಿಯಂತೆಯೇ ನಡೆಯುತ್ತಿದೆ. ಇಂತಹ ಹೊತ್ತಿನಲ್ಲಿ ತಿಳಿ ನೀರು ಕದಡುವ ಯತ್ನ ನಡೆದಿದೆ. ಪುಂಡನ ಹುಚ್ಚಾಟದಿಂದ ಪಾಲಿಕೆಯ ಐದಾರು ವಾಹನಗಳ ಗ್ಲಾಸ್ ಗಳು ಪಿಸ್ ಪಿಸ್ ಆಗಿವೆ.‌ ಹಳೆ ಹುಬ್ಬಳ್ಳಿ ಕೋಮು ಗಲಭೆಕೋರರ ಪ್ರಮುಖ ಅಸ್ತ್ರವಾಗಿದ್ದ, ಕಲ್ಲು ತೂರಾಟ ಈಗ ಮಹಾನಗರ ಪಾಲಿಕೆ ಆವರಣಕ್ಕೂ ಸಹ ಕಾಲಿಟ್ಟಿದೆ. ಇದಕ್ಕೆ ಸಿಸಿಟಿವಿ ದೃಶ್ಯಗಳು ಸಾಕ್ಷಿಯಾಗಿವೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಆಸ್ತಿಗಳನ್ನು ಹಾನಿ ಮಾಡುವುದು ಟ್ರೆಂಡ್ ಆದಂತೆ ಕಾಣುತ್ತಿದೆ. ಇದೆಲ್ಲವನ್ನೂ ನೋಡಿದರೇ ನಿಜಕ್ಕೂ ಸರ್ಕಾರಿ ವಾಹನಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುವಂತ ಸತ್ಯ ಮೇಲ್ನೋಟಕ್ಕೆ ಗೊತ್ತಾಗುತ್ತದೆ.

ಇನ್ನೂ ಪ್ರಕರಣ ಇತ್ತೀಚೆಗಷ್ಟೇ ನಡೆದ ಹಳೆ ಹುಬ್ಬಳ್ಳಿ ಕೋಮು ಗಲಭೆಗೆ ತಳುಕು ಹಾಕಿಕೊಳ್ಳುತ್ತಿದೆ. ಈ ಗಲಭೆಯಿಂದ ಪ್ರಚೋದನೆ ಪಡೆದು ಮೊಹಮ್ಮದ್ ಈ ದಾಳಿ‌ ನಡೆಸಿದ್ದಾನೆ ಎನ್ನಲಾಗಿದೆ. ಇನ್ನೂ ದಾಳಿಗೂ‌ ಮುನ್ನ ಶಾಸಕ ಪ್ರಸಾದ್ ಅಬ್ಬಯ ಕಚೇರಿ ಬಗ್ಗೆ ವಿಚಾರಿಸಿರುವ ಆರೋಪಿ, ಗಲಭೆಯಲ್ಲಿ ಭಾಗಿಯಾದವರನ್ನು ಬಿಡುಗಡೆ ಮಾಡಿ ಅಂತ ಕೂಗಾಗಿಡಿದ್ದಾನೆ ಎನ್ನಲಾಗಿದೆ. ಇನ್ನೂ ಮೊಹಮ್ಮದ್ ಪುಂಡಾಟ ಹೆಚ್ಚಾಗುತ್ತಿದ್ದಂತೆ, ಪಾಲಿಕೆ ಸೆಕ್ಯೂರಿಟಿ ಸಿಬ್ಬಂದಿ ಉಪನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉಪನಗರ ಪೊಲೀಸರು ಆರೋಪಿ ಮೊಹ್ಮದ್ ನನ್ನು ವಶಕ್ಕೆ ಪಡೆದಿದ್ದು, ಸದ್ಯ ವಿಚಾರಣೆ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಪುಂಡರಿಂದ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡುವ ಪ್ರವೃತ್ತಿ ಹೆಚ್ಚಾಗುತಿದೆ‌. ಇತ್ತೀಚೆಗಷ್ಟೇ ಹಳೆ ಹುಬ್ಬಳ್ಳಿ ಗಲಭೆಕೋರರಿಗೆ ಜಾಮೀನು ಸಿಕ್ಕಿದೆ. ಈ ನಡುವೆಯೇ ಈಗ ಇಂತಹ ಘಟನೆ ನಡೆದಿದೆ. ಇದು ಅಚಾನಕ್ ಆಗಿ ನಡೆದಿರುವ ಘಟನೆಯೇ ಅಥವಾ ಇದರಿಂದ ಯಾವುದಾದರೂ ಹುನ್ನಾರ ಇದೆ ಎಂಬುದನ್ನು ಖಾಕಿಪಡೆ ಪತ್ತೆ ಹಚ್ಚಬೇಕಿದೆ.

Edited By : Nagesh Gaonkar
Kshetra Samachara

Kshetra Samachara

26/05/2022 07:25 pm

Cinque Terre

90.72 K

Cinque Terre

15

ಸಂಬಂಧಿತ ಸುದ್ದಿ