ಹುಬ್ಬಳ್ಳಿ: ಖಿನ್ನತೆಗೆ ಒಳಗಾಗಿ ಕೊಠಡಿಯೊಳಗೆ ಸ್ವಯಂ ಬಂಧಿಯಾಗಿದ್ದ ವ್ಯಕ್ತಿಯನ್ನು ಉಪನಗರ ಪೋಲಿಸರು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸಂದೀಪ್ ಶೆಟ್ಟಿ (47) ಕೊಠಡಿಯೊಳಗೆ ಬಂಧಿಯಾದ ವ್ಯಕ್ತಿಯಾಗಿದ್ದು, ಈತ ಕಳೆದ ನಾಲ್ಕು ದಿನಗಳ ಹಿಂದೆ ಅತಿಯಾಗಿ ಕುಡಿದು ಹುಬ್ಬಳ್ಳಿಯ ಬೈಲಪ್ಪನಗರದ ಕೋನಾರ್ಕ್ ಅಪಾರ್ಟ್ಮೆಂಟ್ ನಂ. 203 ಕೊಠಡಿಯಲ್ಲಿ ಬಂಧಿಯಾಗಿದ್ದರು. ಇವರು ಹೊರಗಡೆ ಬರದೇ ಇರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದಾವಿಸಿದ ಉಪನಗರ ಪೊಲೀಸರು ಬಾಗಿಲು ಮುರಿದು ವ್ಯಕ್ತಿಯನ್ನು ರಕ್ಷಣೆ ಮಾಡಿ ಆರೋಗ್ಯ ತಪಾಸಣೆಗೆ ಸ್ಥಳೀಯ ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ ಅವರೊಂದಿಗೆ ಕಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಪಿಎಸ್ಐ ಅಶೋಕ, ಸ್ವಾತಿ ಮುಳಾರಿ, ಎಎಸ್ಐ ಮಠದ, ನಿಲ್ಲಪ್ಪ ಪೂಜಾರ, ಮಂಜು ಮಡಿವಾಳರ ಸೇರಿದಂತೆ ಮುಂತಾದವರು ಇದ್ದರು.
Kshetra Samachara
26/05/2022 04:01 pm