ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 24 ಗಂಟೆಯಲ್ಲೇ ಕೊಲೆ ಕೇಸ್‌ ಬೇಧಿಸಿದ ಖಾಕಿ ಪಡೆ

ಹುಬ್ಬಳ್ಳಿ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಸ್ವತಃ ಒಡಹುಟ್ಟಿದ ಅಕ್ಕನನ್ನೇ ತನ್ನ ಪ್ರಿಯತಮನೊಂದಿಗೆ ಸೇರಿ ತಮ್ಮನನ್ನು ಕೊಲೆ ಮಾಡಿದ್ದು, ಕೊಲೆ ನಡೆದ 24 ಗಂಟೆಯಲ್ಲಿಯೇ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹೇಳಿದ್ದಾರೆ.

ನೂಲ್ವಿ ಗ್ರಾಮದ ಹೊರವಲಯದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಪಕ್ಕದಲ್ಲಿ ನೂಲ್ವಿ ಗ್ರಾಮದ ವ್ಯಾಪ್ತಿಯಲ್ಲಿ ಶಂಭು ಕಮಡೊಳ್ಳಿ ಎಂಬುವ ವ್ಯಕ್ತಿಯನ್ನು ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಾದ 24 ಗಂಟೆಯಲ್ಲಿ ಪ್ರಕರಣದ ಪ್ರಮುಖ ಆರೋಪಿಗಳಾದ ಚನ್ನಪ್ಪಗೌಡ ಹಾಗೂ ಬಸವ್ವ ಎಂಬುವವಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದರು.

ಶಂಭು ಕಮಡೊಳ್ಳಿಯ ಸಹೋದರಿ ಬಸವ್ವ ಎಂಬುವವಳು ಚನ್ನಪ್ಪಗೌಡ ಎಂಬುವವನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಷಯ ಶಂಭುವಿಗೆ ತಿಳಿದಿದ್ದು, ಸಿಕ್ಕಲೆಲ್ಲಾ ಇಬ್ಬರಿಗೂ ಬೈದಾಡಿ ಮಾನ ಮರ್ಯಾದೆ ತೆಗೆಯುತ್ತಿದ್ದರಿಂದ ಕೊಲೆಗೆ ಸಂಚು ರೂಪಿಸಿ ಶಂಭು ಕಮಡೊಳ್ಳಿ ಎಂಬುವನನ್ನು ಕೊಲೆ ಮಾಡಿದ್ದಾರೆ. ಈ ಪ್ರಕರಣವನ್ನು ಬೆನ್ನಟ್ಟಿದ ತಂಡ ನವನಗರದಲ್ಲಿ ಚನ್ನಪ್ಪಗೌಡ ಎಂಬುವನನ್ನು ಹಾಗೂ ನೂಲ್ವಿ ಗ್ರಾಮದಲ್ಲಿ ಬಸವ್ವಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.

ಅನೈತಿಕ ಸಂಬಂಧವೇ ಕೊಲೆಗೆ ಮುಖ್ಯ ಕಾರಣವಾಗಿದ್ದು, ಸದ್ಯಕ್ಕೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಕೊಲೆಯಲ್ಲಿ ಶಾಮೀಲಾದ ಇತರರ ಬಗ್ಗೆ ಮಾಹಿತಿ ಕಲೆ ಹಾಕಲಾಗ್ತಿದೆ. ಬಂಧಿತರಲ್ಲಿ ಕೊಲೆಯಾದ ಶಂಭುವಿನ ಅಕ್ಕ ಸೇರಿದ್ದಾಳೆ. ಶಂಭು ಕೊಲೆಗೆ ಅಕ್ಕ ಬಸವ್ವ ಹಾಗೂ ಆಕೆಯ ಪ್ರಿಯಕರನಿಂದ ಪ್ಲಾನ್ ಮಾಡಿ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದರು. ಗ್ರಾಮಸ್ಥರು ನೀಡಿದ ಮಾಹಿತಿ, ವೈಜ್ಞಾನಿಕ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಗಳ ಬಂಧನ ಮಾಡಲಾಗಿದ್ದು, ಇನ್ನೂ ಈ ಕೊಲೆಗೆ ಸಹಾಯ ಮಾಡಿದವರನ್ನು ವಶಕ್ಕೆ ಪಡೆಯಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅವರು ಸೂಚನೆ ನೀಡಿದರು.

Edited By : Manjunath H D
Kshetra Samachara

Kshetra Samachara

16/05/2022 10:25 pm

Cinque Terre

61.54 K

Cinque Terre

12

ಸಂಬಂಧಿತ ಸುದ್ದಿ