ಧಾರವಾಡ: ತೆಲಂಗಾಣ ರಾಜ್ಯದ ಸರೂರ ನಗರದಲ್ಲಿ ಕಳೆದ ಬುಧವಾರ ದಲಿತ ಯುವಕನ ಕೊಲೆ ನಡೆದಿತ್ತು ಈ ಕೊಲೆಯನ್ನು ಖಂಡಿಸಿ ಇಂದು ಧಾರವಾಡದಲ್ಲಿ ಪ್ರತಿಭಟನೆ ಮಾಡಲಾಗಿದೆ.
ಹೌದು ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದ ಬಿಲ್ಲಿಪುರಂ ನಾಗರಾಜು ಎಂಬುವವನನ್ನು ಯುವತಿಯ ಸಹೋದರರು ಮತ್ತು ಸಂಬಂಧಿಗಳು ಕೊಲೆ ಮಾಡಿರುವುದು ಖಂಡಣೀಯ ಎಂದು ಧಾರವಾಡ ಹಿತರಕ್ಷಣಾ ಯುವಕರ ಸಂಘ ಹಾಗೂ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೊಲೆ ಮಾಡಿದವರ ಎನ್ ಕೌಂಟರ್ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಅಲ್ಲದೇ ಧಾರವಾಡ ಜಿಲ್ಲಾಧಿಕಾರಿ ಮೂಲಕ ತೆಲಂಗಾಣ ರಾಜ್ಯಪಾಲ ಡಾ. ತಮಿಲಸಾಯಿ ಸೌಂದರ್ಯ ರಾಜನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
Kshetra Samachara
07/05/2022 03:35 pm