ಹುಬ್ಬಳ್ಳಿ: ಫೇಸ್‌ಬುಕ್‌ನಲ್ಲಿ ಜಾಹೀರಾತು ವೀಕ್ಷಿಸಿದ ಘಂಟಿಕೇರಿ ಶೀಲವಂತರ ಓಣಿಯ ವಿನೋದ ಜರತಾರಘರ ಎಂಬುವರು ವಸ್ತುವನ್ನು ಖರೀದಿಸಲು ಮುಂದಾದಾಗ ಅಪರಿಚಿತ ವ್ಯಕ್ತಿ ಓರ್ವ 40,500 ರೂ. ವಂಚಿಸಿದ ಪ್ರಕರಣ ಸೈಬರ್ ಠಾಣೆಯಲ್ಲಿ ದಾಖಲಾಗಿದೆ.
ಫೇಸ್‌ಬುಕ್‌ನಲ್ಲಿ ರಬ್ಬರ್ ಬ್ಯಾಂಡ್ ಜಾಹೀರಾತು ನೋಡಿ ಕಮೆಂಟ್‌ನಲ್ಲಿದ್ದ ನಂಬರ್ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ಓರ್ವ ಮಾತನಾಡಿ, ತನ್ನ ಖಾತೆಗೆ ವಿನೋದ ಅವರಿಂದ ಹಣ ವರ್ಗಾಯಿಸಿಕೊಂಡಿದ್ದಾನೆ. ನಂತರ ರಬರ್ ಬ್ಯಾಂಡ್‌ಗಳನ್ನು ನೀಡದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
Kshetra Samachara
05/05/2022 09:36 am