ಲಕ್ಷ್ಮೇಶ್ವರ: ಕಳೆದ ಏಪ್ರಿಲ್ ತಿಂಗಳು ಸಿನಿಮೀಯ ರೀತಿಯಲ್ಲಿ ಲಕ್ಷ್ಮೇಶ್ವರ ಪಟ್ಟಣದ ಎಸ್‌ಬಿಐನಿಂದ ಹಣ ಪಡೆದು ಹೊರಟಿದ್ದ ವ್ಯಕ್ತಿ ಕೈಯಿಂದ ಹತ್ತು ಲಕ್ಷ ನಗದು ಹಣದ ಬ್ಯಾಗ್ ಎಗರಿಸಿ ಪರಾರಿಯಾದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು ! ಲಕ್ಷ್ಮೇಶ್ವರ ಪೊಲೀಸ್ ಇನ್ಸಪೆಕ್ಟರ್ ವಿಕಾಸ ಲಮಾಣಿ ಹಾಗೂ ಸಬ್ ಇನ್ಸಪೆಕ್ಟರ್ ಪ್ರಕಾಶ್.ಡಿ ನೇತೃತ್ವದಲ್ಲಿ ಐದು ಪೊಲೀಸರು ಎಂಟು ದಿನಗಳ ಕಾಲ ವಿವಿಧೆಡೆ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಪತ್ತೆ ಮಾಡಿ ಬಂಧಿಸಿ ಕರೆತಂದಿದ್ದಾರೆ. ಬಂಧಿತರಿಂದ ಐದು ಲಕ್ಷ ನಗದು ಹಣ ಹಾಗೂ ಬೈಕ್ ವಶಪಡಿಸಿಕೊಂಡಿದ್ದು ಬಂಧಿತರ ಸಂಪರ್ಕದಲ್ಲಿದ್ದವರ ಮಾಹಿತಿ ಕಲೆ ಹಾಕುತ್ತಿದ್ದಾರೆ, ಇನ್ಸಪೆಕ್ಟರ್ ವಿಕಾಸ ಲಮಾಣಿಯವರ ಕಾರ್ಯಾಚರಣೆಗೆ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜ್ ಮತ್ತು ಡಿವೈಎಸ್ಪಿ ಶಿವಾನಂದ ಶೆಟ್ಟಿ ಮಾರ್ಗದರ್ಶನ ಮಾಡಿದ್ದರು.
ಎಪ್ರಿಲ್ ತಿಂಗಳು ಎಸ್‌ಬಿಐ ಬ್ಯಾಂಕ್ ಮುಂದೆ ಸೇರಿದ್ದ ಕಳ್ಳರ ಗುಂಪು ಏಕಾಏಕಿ ಹತ್ತು ಲಕ್ಷ ರೂಪಾಯಿ ಇದ್ದ ಬ್ಯಾಗ್ ಎಗರಿಸಿದ್ದರು. ಈ ದೃಶ್ಯಾವಳಿ ಹಾಗೂ ಕಳ್ಳರ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು.
Kshetra Samachara
04/05/2022 02:43 pm