ಅಣ್ಣಿಗೇರಿ: ಕಳೆದ ತಿಂಗಳಿನಲ್ಲಿ ಅಣ್ಣಿಗೇರಿ ಪಟ್ಟಣದ ಹೊರವಲಯದ ಬಂಗಾರಪ್ಪ ಬಡಾವಣೆಯ ಹತ್ತಿರ ಎರಡು ಮಿನಿ ವಾಹನ ಹಾಗೂ ಒಂದು ದೊಡ್ಡ ಲಾರಿಯಲ್ಲಿ ಅಕ್ರಮ ಪಡಿತರ ಅಕ್ಕಿ ತುಂಬಿಸುತ್ತಾರೆ ಎಂಬ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿ ಗಾಡಿಗಳು ಹಾಗೂ ಕೆಲವು ಜನರನ್ನು ಬಂಧಿಸಲಾಗಿತ್ತು.
ಈಗ ಮತ್ತೆ ನಿನ್ನೆ ರಾತ್ರಿ ರಾಷ್ಟ್ರೀಯ ಹೆದ್ದಾರಿ ಗದಗ- ಹುಬ್ಬಳ್ಳಿ ಮಾರ್ಗ ಮಧ್ಯೆ ಬರುವ ಅಣ್ಣಿಗೇರಿ ಪಟ್ಟಣದ ಹೊರವಲಯದ ಜಿನ್ನಿಂಗ್ ಫ್ಯಾಕ್ಟರಿ ಒಂದರಲ್ಲಿ ಸರ್ಕಾರದಿಂದ ಪೂರೈಕೆಯಾಗುವ ಉಚಿತ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಬೇರೆ-ಬೇರೆ ಕಡೆ ಮಾರಾಟ ಮಾಡುವುದಕ್ಕಾಗಿ ಗಾಡಿಯಲ್ಲಿ ಸಾಗಾಟ ಮಾಡಲು ತುಂಬಿದ್ದ 600ರಿಂದ 700 ಚೀಲಗಳನ್ನು ಅನಾಮಧೇಯ ವ್ಯಕ್ತಿಯ ಮಾಹಿತಿಯಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪವಿಭಾಗಾಧಿಕಾರಿ ಮಾಧವ್ ಗಿತ್ತೆ ಹಾಗೂ ತಾಲೂಕು ದಂಡಾಧಿಕಾರಿ ಮಂಜುನಾಥ್ ಅಮಾಸೆ ನೇತೃತ್ವದಲ್ಲಿ ದಾಳಿ ನಡೆಸಿ ವಶಪಡಿಸಿದ್ದಾರೆ.
ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Kshetra Samachara
19/04/2022 02:41 pm