ಹುಬ್ಬಳ್ಳಿ: ಕಲ್ಲು ತೂರಾಟ ಕೇಸ್ ಹಿಂದಿದೆ ಕಣ್ಣೀರ ಕಹಾನಿ- ಬಂಧಿತರ ಕುಟುಂಬಸ್ಥರ ಆಕ್ರಂದನ
ಹುಬ್ಬಳ್ಳಿ: ಅದು ನಿಜಕ್ಕೂ ಹುಬ್ಬಳ್ಳಿಯನ್ನು ಹೊತ್ತಿ ಉರಿಯುವಂತೆ ಮಾಡಿದ್ದ ಘಟನೆ. ಆ ಘಟನೆಯ ಕಲ್ಲು ತೂರಾಟದ ವಿಡಿಯೋಗಳನ್ನು ಹಾಗೂ ಆಕ್ರೋಶದ ಚಿತ್ರಣಗಳನ್ನು ನೋಡಿದ್ದೇವೆ. ಆದರೆ ಪಬ್ಲಿಕ್ ನೆಕ್ಸ್ಟ್ ಬಿಚ್ಚಿಡುತ್ತಿದೆ. ಪ್ರಕರಣದ ಹಿಂದಿನ ಕಣ್ಣೀರಿನ ಕಥೆ. ಹಾಗಿದ್ದರೇ ಏನಿದು ಸ್ಟೋರಿ ಅಂತೀರಾ ಇಲ್ಲಿದೆ ನೋಡಿ ಕಣ್ಣೀರಿನ ಕಹಾನಿ.
ಹೀಗೆ ಕೋರ್ಟ್ ಆವರಣದಲ್ಲಿ ಕಣ್ಣೀರು ಹಾಕುತ್ತಿರುವ ಮಹಿಳೆಯರು. ನಮ್ಮ ಮಗ, ನನ್ನ ಗಂಡ, ನಮ್ಮ ಮನೆಯವರು ಯಾವುದೇ ತಪ್ಪು ಮಾಡಿಲ್ಲ ಎಂದು ಕಂಬನಿ ಸುರಿಸುತ್ತಿರುವ ಸಂಬಂಧಿಕರು. ಈ ಎಲ್ಲ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಆ ರಾತ್ರಿ ನಡೆದ ಭಯಾನಕ ಘಟನೆ. ಹೌದು. ಅಭಿಷೇಕ ಹಿರೇಮಠ ಎಂಬುವಂತ ಯುವಕ ಪೋಸ್ಟ್ ಮಾಡಿದ 14 ಸೆಕೆಂಡ್ ವಿಡಿಯೋ ಈಗ ಹೂಬಳ್ಳಿಯನ್ನು ಹೊತ್ತಿ ಉರಿಯುವಂತೆ ಮಾಡಿದೆ. ಕಲ್ಲು ತೂರಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ 88 ಜನರನ್ನು ಅರೆಸ್ಟ್ ಮಾಡಿದ್ದು, ಈಗ ಪಾಲಕರು ಆಕ್ರಂದನ ಮುಗಿಲು ಮುಟ್ಟಿದೆ. ನಮ್ಮ ಮಗ ತಪ್ಪು ಮಾಡಿಲ್ಲ. ಅವರನ್ನು ಸುಖಾಸುಮ್ಮನೆ ಕರೆದುಕೊಂಡು ಹೋಗಿದ್ದಾರೆ. ಕೈ ಮುಗಿದು ಕೇಳುತ್ತೇವೆ ನಮ್ಮ ಮಗನನ್ನು ಬಿಟ್ಟು ಬಿಡಿ ಎಂದು ಅಂಗಲಾಚುತ್ತಿದ್ದಾರೆ.
ಪ್ರತಿಯೊಬ್ಬರೂ ಕೂಡ ತಮ್ಮ ತಮ್ಮ ಮನೆಗೆ ಆಧಾರ ಸ್ಥಂಭವಾಗಿರುತ್ತಾರೆ. ಇಂತಹದೊಂದು ಘಟನೆಯಿಂದ ಮನೆಯ ಮಂದಿಯೇ ಕಣ್ಣೀರು ಹಾಕುವಂತಾಗಿದೆ. ಈ ದೃಶ್ಯಗಳನ್ನು ಸರಿಯಾಗಿ ನೋಡಿ ನೀವು ಮಾಡುವ ಚಿಕ್ಕ ತಪ್ಪು ನಿಜಕ್ಕೂ ನಿಮ್ಮ ಕುಟುಂಬದವರು ಸಂಕಷ್ಟ ಅನುಭವಿಸುತ್ತಾರೆ. ಮಗನಿಗಾಗಿ ಹೆತ್ತ ತಾಯಿ, ಗಂಡನ ಬರುವಿಕೆಗಾಗಿ ಕಟ್ಟಿಕೊಂಡ ಹೆಂಡತಿ, ಅಪ್ಪನ ಬರುವಿಕೆಗಾಗಿ ಮಕ್ಕಳು ಎದುರು ನೋಡುತ್ತಾ ಕಣ್ಣೀರು ಹಾಕುವ ಸ್ಥಿತಿಗೆ ಆ ಒಂದು ವಿಡಿಯೋ ಸಾಕ್ಷಿಯಾಗಿರುವುದು ವಿಪರ್ಯಾಸಕರ ಸಂಗತಿಯಾಗಿದೆ.
ಒಟ್ಟಿನಲ್ಲಿ ಇಂತಹದೊಂದು ಘಟನೆ ಮನುಕುಲಕ್ಕೆ ಮಾರಕವಾಗಿದ್ದು, ಬಳ್ಳಿಯ ಹೂವು ಎಲೆಗಳಿಂತಿದ್ದ ಹಿಂದೂ ಮುಸ್ಲಿಮರು ಈಗ ದ್ವೇಷದ ಜ್ವಾಲೆಯನ್ನು ಉಡಿಯಲ್ಲಿ ಕಟ್ಟಿಕೊಂಡಿರುವುದು ನಿಜಕ್ಕೂ ಚಿಂತಾಜನಕ ಸಂಗತಿಯಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/04/2022 10:42 pm