ಹುಬ್ಬಳ್ಳಿ: ಐಪಿಎಲ್ ಕ್ರಿಕೆಟ್ ಮೇಲೆ ನಗರದ ವಿವಿಧೆಡೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಹುಧಾ ಪೊಲೀಸರು ಏಳು ಮಂದಿ ಬಂಧಿಸಿದ್ದಾರೆ.ಬಂಧಿತರಿಂದ ಏಳು ಮೊಬೈಲ್ ಹಾಗೂ 82,300 ನಗದು ವಶ ಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿಯ ಡಾಲರ್ಸ್ ಕಾಲೊನಿ, ಸುಳ್ಳ ರಸ್ತೆ, ಮಂಟೂರ್ ರಸ್ತೆ, ಇಸ್ಲಾಂಪುರ ರಸ್ತೆ ಬಳಿ ಮೊಬೈಲ್ ಮೂಲಕ ಬೆಟ್ಟಿಂಗ್ ವ್ಯವಹಾರ ನಡೆಸುತ್ತಿದ್ದ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ.ಗೋಕುಲ್ ರಸ್ತೆ, ಕೇಶ್ವಾಪುರ, ಶಹರ ಮತ್ತು ಕಸಬಾಪೇಟೆ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
Kshetra Samachara
13/04/2022 11:17 am