ಕುಂದಗೋಳ : ಗಾಂಜಾ ಮಾರಾಟ ಮಾಡುತ್ತಿದ್ದ ಎರಡು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾದ ಗುಡಗೇರಿ ಗ್ರಾಮೀಣ ಪೋಲೀಸರು ಬಂಧಿತರಿಂದ 628 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಹೌದು ! ಕುಂದಗೋಳ ತಾಲೂಕಿನ ಬು.ತರ್ಲಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲಗುಡ್ಡ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ರೀಯಾಜ್ ಖಾದರಸಾಬ್ ನದಾಫ್ ಮತ್ತು ಶಂಭು ಬಸವರಾಜ ಹುಬ್ಬಳ್ಳಿ ಎಂಬ ಇಬ್ಬರು ಅನಧಿಕೃತವಾಗಿ ತಮ್ಮ ಬಳಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುವ ವೇಳೆ ಪೊಲೀಸ್ ಬಲೆಗೆ ಸಿಲುಕಿದ್ದಾರೆ.
ಡಿಸೇಂಬರ್ 7 ರಂದು ಶನಿವಾರ ಈ ಘಟನೆ ನಡೆದಿದ್ದು, ಗುಡಗೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
Kshetra Samachara
09/12/2024 01:39 pm