ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಿಮ್ಸ್ ಉದ್ಯೋಗಿಗೆ ಗೂಗಲ್ ಫೇ ಮೂಲಕ 2.30 ಲಕ್ಷ ರೂ. ವಂಚನೆ

ಹುಬ್ಬಳ್ಳಿ: ಕೆವೈಸಿ ಅಪ್‌ಡೇಟ್ ಮಾಡಿಕೊಡುವುದಾಗಿ ನಂಬಿಸಿ ಒಟಿಪಿ ಪಡೆದು ಸುಮಾರು 2.30 ಲಕ್ಷ ರೂ. ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡು ವಂಚಿಸಿದ ಪ್ರಕರಣ ಹುಬ್ಬಳ್ಳಿ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ.

ನಗರದ ಕಿಮ್ಸ್‌ನಲ್ಲಿ ಉದ್ಯೋಗಿಯಾಗಿರುವ ಜ್ಯೋತಿ ಎಚ್. ಅವರು ವಂಚನೆಗೆ ಒಳಗಾಗಿದ್ದಾರೆ. ಇವರ ಗೂಗಲ್ ಫೇ ಖಾತೆ ವ್ಯವಹಾರ ಬಂದಾಗಿತ್ತು. ಅದೇ ವೇಳೆ ಮೊಬೈಲ್‌ಗೆ ಮೇಸೆಜ್ ಮಾಡಿ ಕೆವೈಸಿ ಅಪ್ ಡೆಟ್ ಮಾಡುವುದಾಗಿ ಹೇಳಿ ನಂಬಿಸಿ ಬ್ಯಾಂಕ್ ವಿವರ, ಒಟಿಪಿ ಪಡೆದು ಹಂತ - ಹಂತವಾಗಿ 2,30,515 ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Edited By : Vijay Kumar
Kshetra Samachara

Kshetra Samachara

09/04/2022 10:25 pm

Cinque Terre

19.21 K

Cinque Terre

2

ಸಂಬಂಧಿತ ಸುದ್ದಿ